ಉತ್ತರನ ಪೌರುಷ ಒಲೆಮುಂದೆ, ಬಿಜೆಪಿಯವರ ಪೌರುಷ ಮಾಧ್ಯಮದವರ ಮುಂದೆ : ಗೃಹ ಸಚಿವ

ಬೆಂಗಳೂರು : ಕರ್ನಾಟಕದಲ್ಲಿ ಯಾರೇ ಪ್ರಚಾರಕ್ಕೆ ಬಂದರೂ ಗೆಲ್ಲುವುದು ಸಿದ್ದರಾಮಯ್ಯನವರೇ, ಕರ್ನಾಟಕದಲ್ಲಿ ಮೋದಿ ಹವಾ ಇಲ್ಲ. ಇಲ್ಲಿರುವುದು ಏನಿದ್ದರೂ ಸಿದ್ದರಾಮಯ್ಯನವರ ಹವಾ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜನರ ಒತ್ತಾಯಕ್ಕೆ ಮಣಿದು ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸುತ್ತಿದ್ದಾರೆ. ಮೋದಿ ಸಹ ಲೋಕಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಹಾಗಾದರೆ ಅವರಿಗೂ ಸೋಲಿನ ಭಯವಿತ್ತಾ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯಲ್ಲೂ ಭಿನ್ನಮತವಿದೆ, ಯಡಿಯೂರಪ್ಪ, ಈಶ್ವರಪ್ಪ ಕಿತ್ತಾಡಿಕೊಂಡಿದ್ದರು. ಬಿಜೆಪಿಯಲ್ಲಿರುವಷ್ಟು ಜಗಳ ಇನ್ಯಾವ ಪಕ್ಷದಲ್ಲೂ ಇಲ್ಲ. ಉತ್ತರನ ಪೌರುಷ ಒಲೆ ಮುಂದೆ ಎಂದ ಹಾಗೆ ಬಿಜೆಪಿಯವರ ಪೌರುಷವೇನಿದ್ದರೂ ಮಾಧ್ಯಮದವರ ಮುಂದಷ್ಟೇ ಎಂದು ವ್ಯಂಗ್ಯ ಮಾಡಿದ್ದಾರೆ.

Leave a Reply

Your email address will not be published.