ಸಿದ್ದರಾಮಯ್ಯ ಎಂದಿಗೂ ಹುಲಿ, ಅವರೇ ನಿಜವಾದ ಜನನಾಯಕ : ಜಮೀರ್ ಅಹ್ಮದ್‌

ಮಂಡ್ಯ : ನಾನು ಕುಮಾರಸ್ವಾಮಿ ಜೊತೆ ಇಡೀ ದಿನ ಇರುತ್ತಿದ್ದೆ. ಅವನು ಏನು‌ ಮಾಡುತ್ತಾನೆ ಎಲ್ಲವನ್ನೂ‌ ಹತ್ತಿರದಿಂದ ನೋಡಿದ್ದೇನೆ. ಆದರೆ ಒಂದೇ ಒಂದು ಮಾತ್ರ ನೋಡೊಕೆ ಸಾಧ್ಯವಾಗಲಿಲ್ಲ. ಪ್ಯಾಂಟ್ ಬಿಚ್ಚುವಾಗ ಖಾಕಿ ಚಡ್ಡಿ ಹಾಕಿದ್ದಾರ ಹೇಗೆ ಅಂತ ನೋಡಲಿಲ್ಲ ಎಂದು ಶಾಸಕ ಜಮೀರ್‌ ಅಹ್ಮದ್‌ ಲೇವಡಿ ಮಾಡಿದ್ದಾರೆ.

ಶಾಸಕ ನರೇಂದ್ರ ಸ್ವಾಮಿ ಪರ ಮಳವಳ್ಳಿ‌ ಮುಸ್ಲಿಂ ಕಾಲೋನಿಯಲ್ಲಿ‌ ಮತಯಾಚನೆ ಮಾಡಿದ ಜಮೀರ್‌ ಅಹ್ಮದ್‌, ಬಿಜೆಪಿ ಜೊತೆ ಅವರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ದೇವೆಗೌಡರು ಜಾತ್ಯಾತೀತವಾಗಿದ್ದಾರೆ. ಅದರಲ್ಲಿ ಶೇ.10ರಷ್ಟು ಕೂಡ ಕುಮಾರಸ್ವಾಮಿ ಜಾತ್ಯಾತೀತವಾಗಿಲ್ಲ. ಸಿದ್ದರಾಮಯ್ಯ ನಿಜವಾದ ಜನ ನಾಯಕ. ಎಲ್ಲಾ ಸಮುದಾಯದವರಿಗೂ ತಲುಪುವ ಕಾರ್ಯಕ್ರಮ ಕೊಟ್ಟಿದ್ದಾರೆ. ಕೋಮುವಾದಿ ಬಿಜೆಪಿ, ಅವಕಾಶವಾದಿ‌ ಜೆಡಿಎಸ್. ಇವರೆಡರ ಬದಲಿಗೆ ಕಾಂಗ್ರೆಸ್ ಅಲ್ಪಸಂಖ್ಯಾತರ ಪರವಾಗಿದೆ. ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರಿಗೆ ಸಾಕಷ್ಟು ಯೋಜನೆ ರೂಪಿಸಿದೆ. ಬಿಜೆಪಿ ಜೆಡಿಎಸ್ ಅಲ್ಪಸಂಖ್ಯಾತರ ವಿರೋಧಿ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com