ಕಾಂಗ್ರೆಸ್‌ ತೊರೆದ ರೇವಣ ಸಿದ್ದಯ್ಯ : CM ನನ್ನನ್ನು ನಾಯಿಯಂತೆ ನಡೆಸಿಕೊಂಡಿದ್ದಾರೆಂದ ನಾಯಕ

ಬೆಂಗಳೂರು : ಚುನಾವಣೆಯ ಹೊತ್ತಿನಲ್ಲೇ ಕಾಂಗ್ರೆಸ್‌ ಗೆ ಬಿಗ್ ಶಾಕ್‌ ಎದುರಾಗಿದೆ. ವರುಣಾ ಕ್ಷೇತ್ರದ ಪ್ರಭಾವಿ ಮುಖಂಡ ರೇವಣ ಸಿದ್ದಯ್ಯ ಇಂದು ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದಯ್ಯ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ ದೇವೇಗೌಡರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಸಿದ್ದರಾಮಯ್ಯ ನನ್ನನ್ನು ಪ್ರಾಣಿಯಂತೆ ಬಳಸಿಕೊಂಡಿದ್ದಾರ. ಚುನಾವಣೆ ಹತ್ತಿರವಾಗುತ್ತಿದ್ದಂತೆ ನಮ್ಮ ಮನೆಗೆ ಬಿಸ್ಕೆಟ್‌ ಹಾಕಲು ಬರುತ್ತಾರೆ. ಸಿದ್ದರಾಮಯ್ಯ ನನ್ನ ನೇರ ವಿರೋಧಿಯಾಗಿದ್ದಾರೆ. ಕಾಂಗ್ರೆಸ್‌ ಬಗ್ಗೆ ನನಗೆ ಅಸಮಾಧಾನವಿಲ್ಲ. ಆದರೆ ಸಿದ್ದರಾಮಯ್ಯ ಸೋಲಬೇಕು ಎಂಬುದೇ ನನ್ನ ಗುರಿ. ನಾನು ಕಾಂಗ್ರೆಸ್‌ ಬಿಟ್ಟ ಮೇಲೆ ಇನ್ಯಾವ ಪಕ್ಷಕ್ಕೂ ಸೇರುವುದಿಲ್ಲ ಎಂದಿದ್ದಾರೆ.

ನಾನು ಮೊದಲೇ ಕಾಂಗ್ರೆಸ್‌ನಲ್ಲಿದ್ದರೂ ಸಿದ್ದರಾಮಯ್ಯನಿಗಾಗಿ ದುಡಿದಿದ್ದೆ. ಯಾರೇ ಏನೇ ಹೇಳಿದರೂ ಒಬ್ಬ ಸ್ನೇಹಿತನಾಗಿ ಕಾಯಾ, ವಾಚಾ, ಮನಸಾ ಸಹಾಯ ಮಾಡಿದ್ದೇನೆ. ಆದ್ದರಿಂದಲೇ 2004ರ ಚುನಾವಣೆಯಲ್ಲಿ ಅವರು ಗೆದ್ದಿದ್ದರು. ಆ ದಿನವೇ ಸಿದ್ದರಾಮಯ್ಯ ನನ್ನ ಮನೆಗೆ ಬಂದು ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಅಥವಾ ವರುಣಾದಲ್ಲಿ ಒಂದನ್ನು ನಿನಗಾಗಿ ಬಿಟ್ಟುಕೊಡುತ್ತೇನೆ ಎಂದಿದ್ದರು. ಆದರೆ ನನ್ನ ವಿಚಾರದಲ್ಲಿ ಅವರು ವಚನ ಭ್ರಷ್ಟರಾಗಿದ್ದಾರೆ. 2013ರಲ್ಲಿ ಮತ್ತೆ ನನ್ನ ಮನವೊಲಿಸಿ ಗೆದ್ದರು. ಆದರೆ ಅಂದಿನಿಂದ ಇಂದಿನವರೆಗೂ ಕೃತಜ್ಞತೆ ಇಲ್ಲದಂತೆ ನಡೆದುಕೊಂಡಿದ್ದಾಗಿ ಅಸಮಾಧಾನ ಹೊರಹಾಕಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com