IPL : ಎಬಿಡಿ ಅಬ್ಬರಕ್ಕೆ ಡೆವಿಲ್ಸ್ ತತ್ತರ : RCB ಗೆ ಆರು ವಿಕೆಟ್ಗಳ ಅಮೋಘ ಜಯ
ಬೆಂಗಳೂರು : ಎಬಿಡಿ ವಿಲಿಯರ್ಸ್ ಆಕರ್ಷಕ ಅರ್ಧ ಶತಕನ ನೆರವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತವರಿನಲ್ಲೇ ಭರ್ಜರಿ ಜಯ ಗಳಿಸಿದೆ. ಶನಿವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಆರು ವಿಕೆಟ್ಗಳ ಅಮೋಘ ಜಯ ಸಾಧಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಫೀಲ್ಡಿಂಗ್ ಆಯ್ದುಕೊಂಡಿತು. ಡೆಲ್ಲಿ ಡೇರ್ ಡೆವಿಲ್ಸ್ ನಿಗದಿತ 20 ಓವರ್ಗಳಲ್ಲಿ 174ರನ್ ಪೇರಿಸಿತ್ತು.

175ರನ್ಗಳ ಗುರಿಯ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಪರ ಎಬಿಡಿ ವಿಲಿಯರ್ಸ್ 90 ರನ್ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಇನ್ನು ಎರಡು ಓವರ್ ಬಾಕಿ ಇರುವಾಗಲೇ ಆರ್ಸಿಬಿ ತಂಡ ಗೆಲುವು ಮುಡಿಗೇರಿಸಿಕೊಂಡಿತು.
ಆರ್ಸಿಬಿ ತಂಡ ಮೊದಲು ಬ್ಯಾಟಿಂಗ್ನಲ್ಲಿ ಮುಗ್ಗರಿಸಿದರೂ ಬಳಿಕ ಕ್ಯಾಪ್ಟನ್ ಕೊಹ್ಲಿ ಹಾಗೂ ಎಬಿಡಿ ಅದ್ಭುತ ಜೊತೆಯಾಟ ಆಡಿದ್ದು, ತಂಡವನ್ನು ಗೆಲ್ಲಿಸುವಲ್ಲಿ ಸಫಲರಾದರು.