ಜ್ಯೋತಿಷ್ಯ ಹೇಳಿಕೊಡ್ತೀನಿ ಅಂತ ಹೆಣ್ಮಕ್ಳ ಮೈ ಕೈ ಮುಟ್ತಿದ್ದ ಸ್ವಾಮೀಜಿಗೆ ಆಮೇಲಾದ ಗತಿಯೇನು ?

ಬೆಂಗಳೂರು : ಖಾಸಗಿ ವಾಹಿನಿಯೊಂದರಲ್ಲಿ ಜ್ಯೋತಿಷ್ಯ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದ ಹಾಗೂ ಜ್ಯೋತಿಷ್ಯ ತರಬೇತಿ ನೀಡುತ್ತಿದ್ದ ದಿನೇಶ್‌ ಗುರೂಜಿ ಎಂಬಾತನನ್ನು ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.

ಈತ ಜ್ಯೋತಿಷ್ಯ ಕಲಿಸಿಕೊಡುವ ನೆಪದಲ್ಲಿ 28 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಆರೋಪಿಸಲಾಗಿದೆ. ಸಂತ್ರಸ್ತೆ ನೀಡಿದ ದೂರಿನ ಅನ್ವಯ ಅತ್ಯಾಚಾರ ಹಾಗೂ ವಂಚನೆ ಆರೋಪದಡಿ ಎಫ್‌ಐಆರ್‌ ದಾಖಲಿಸಲಾಗಿದ್ದು, ಆತನ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.

ಅಬ್ಬಿಗೇರಿ ನಿವಾಸಿಯಾದ ದಿನೇಶ್, ನಗರದ ಕೆಲವೆಡೆ ಜ್ಯೋತಿಷ್ಯ ತರಬೇತಿ ಕೇಂದ್ರಗಳನ್ನು ನಡೆಸುತ್ತಿದ್ದಾರೆ. ಅಲ್ಲದೆ ಖಾಸಗಿ ವಾಹಿನಿಯಲ್ಲಿ ದಿನನಿತ್ಯ ಕಾರ್ಯಕ್ರಮ ನಡೆಸಿಕೊಡುತ್ತಿದ್ದು, ಇದನ್ನು ನೋಡುತ್ತಿದ್ದ ಮಹಿಳೆ ಒಂದು ದಿನ ಕರೆ ಮಾಡಿ ತನ್ನ ಸಮಸ್ಯೆಗಳನ್ನು ಈತನಲ್ಲಿ ಹೇಳಿದ್ದಾರೆ. ಆಕೆಯ ಜೊತೆ ಸ್ವಲ್ಪ ಸಮಯ ಮಾತನಾಡಿ ಬಳಿಕ ಸುದ್ದಿವಾಹಿನಿಯ ಸಿಬ್ಬಂದಿ ಬಳಿ ಮಹಿಳೆಯ ನಂಬರ್ ಪಡೆದುಕೊಂಡು ಸಂಪರ್ಕಿಸಿದ್ದ. ಅಲ್ಲದೆ  ನಾನು ಜ್ಯೋತಿಷ್ಯ ಕಲಿಯಬೇಕು ಎಂದಿದ್ದ ಮಹಿಳೆಗೆ ಮೊದಲು ನೀನು ನನ್ನ ಶಿಷ್ಯೆ ಆಗು. ಬಳಿಕ ನಿನಗೆ ಎಲ್ಲವನ್ನೂ ಹೇಳಿಕೊಡುತ್ತೇನೆ ಎಂದಿದ್ದ ಆತ,  ಪತ್ನಿ ಊರಿಗೆ ಹೋದ ವೇಳೆ ಮಹಿಳೆಯನ್ನು ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದ ಎಂದು ತಿಳಿದುಬಂದಿದೆ.

ಈತ ಅನೇಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಈತನಿಂದ ವಂಚನೆಗೊಳಗಾದ ಮಹಿಳೆಯರು ಜ್ಯೋತಿಷಿ ವಿರುದ್ಧ ದೂರು ನೀಡಲು ಮುಂದಾಗಿದ್ದರು. ಇದಕ್ಕೆ ಹೆದರಿದ ಆರೋಪಿ ಸಂತ್ರಸ್ತೆಯಿಂದ 50 ಲಕ್ಷ ಪಡೆದು ಇತರೆ ಮಹಿಳೆಯರಿಗೆ ನೀಡಿದ್ದ ಎಂದು ತಿಳಿದುಬಂದಿದೆ.

 

One thought on “ಜ್ಯೋತಿಷ್ಯ ಹೇಳಿಕೊಡ್ತೀನಿ ಅಂತ ಹೆಣ್ಮಕ್ಳ ಮೈ ಕೈ ಮುಟ್ತಿದ್ದ ಸ್ವಾಮೀಜಿಗೆ ಆಮೇಲಾದ ಗತಿಯೇನು ?

Leave a Reply

Your email address will not be published.

Social Media Auto Publish Powered By : XYZScripts.com