ನಂಗೆ ಹಿಂದಿ ಬರಲ್ಲ ಸರ್‌, ಕನ್ನಡ ಅಥವಾ ಇಂಗ್ಲೀಷ್‌ನಲ್ಲಿ ಟ್ವೀಟ್‌ ಮಾಡಿ : BJP ಕಾಲೆಳೆದ CM

ಬೆಂಗಳೂರು : ಕನ್ನಡ ಅಥವಾ ಇಂಗ್ಲೀಷ್‌ನಲ್ಲಿ ಟ್ವೀಟ್‌ ಮಾಡಿ ಸರ್‌, ನನಗೆ ಹಿಂದಿ ಬರುವುದಿಲ್ಲ. ನೀವು ಹಿಂದಿಯಲ್ಲಿ ಬರೆದರೆ ನನಗೆ ಏನೂ ಅರ್ಥವಾಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್‌ ರಾವ್‌ ಅವರಿಗೆ ಟಾಂಗ್‌ ನೀಡಿದ್ದಾರೆ.

ಶನಿವಾರ ಮುರಳೀಧರ್‌ ರಾವ್‌ ಹಿಂದಿಯಲ್ಲಿ ಸಿದ್ದರಾಮಯ್ಯ ಅವರಿಗೆ ಟ್ವೀಟ್‌ ಮಾಡಿ, ಸಿದ್ದರಾಮಯ್ಯನವರೇ ನೀವು ಹೆದರಿದ್ದೀರಾ, ಕಷ್ಟ ಪಟ್ಟು ಚಾಮುಂಡೇಶ್ವರಿ ಕ್ಷೇತ್ರ ಾಯ್ದುಕೊಂಡಿದ್ದೀರಿ, ಅಲಿಲಯೂ ನಿಮ್ಮ ಸೋಲು ಖಚಿತ, ಇದಕ್ಕಾಗಿ ಬೇರೆ ಕ್ಷೇತ್ರ ಹುಡುಕಿಕೊಂಡಿದ್ದೀರಲ್ಲವೇ, ಆದರೆ ಕರ್ನಾಟಕದಲ್ಲ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿಯವರು ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ಕನ್ನಡದಲ್ಲಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಸರ್‌ ನನಗೆ ಹಿಂದಿ ಬರುವುದಿಲ್ಲ. ದಯವಿಟ್ಟು ಕನ್ನಡ ಅಥವಾ ಇಂಗ್ಲೀಷ್‌ನಲ್ಲಿ ಟ್ವೀಟ್ ಮಾಡಿ ಎಂದಿದ್ದಾರೆ.

ಇದಕ್ಕೆ ಮುರಳೀಧರ್‌ ರಾವ್‌ ಈ ಹಿಂದೆ ಮಾಡಿದ್ದ ಟ್ವೀಟನ್ನೇ ಕನ್ನಡಕ್ಕೆ ಅನುವಾದ ಮಾಡಿ ರೀ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com