ರಾಜ್ಯದಲ್ಲಿ ಕಾಂಗ್ರೆಸ್‌ 50 ಸೀಟು ಗೆಲ್ಲೋದೂ ಕಷ್ಟ : ಪ್ರಕಾಶ್‌ ಜಾವಡೇಕರ್‌

ಬೆಂಗಳೂರು : ಮಹದೇವಪುರ ಕ್ಷೇತ್ರದ ಮಾರತ್ತಹಳ್ಳಿ ಬಳಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಬಿಜೆಪಿ ಸಮಾವೇಶವನ್ನು ಕರ್ನಾಟಕ ಬಿಜೆಪಿ ಉಸ್ತುವಾರಿ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು ಬೆಂಗಳೂರು ನಗರದಲ್ಲಿ ನೀರಿನಿಂದ ಕೂಡಿರಬೇಕಾದ ಕೆರೆಗಳು ಬೆಂಕಿ ಉಗುಳುವ ಸ್ಥಿತಿ ಬಂದು ತಲುಪಿರುವುದು ಸಿದ್ದರಾಮಯ್ಯ ಸರ್ಕಾರದ ಸಾಧನೆಯಾಗಿದೆ. ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದು, ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸುತ್ತಿರುವುದು ನೋಡಿದರೆ ಬಹುತೇಕ ಎಲ್ಲಾ ಅಭ್ಯರ್ಥಿಗಳ ಹಣ ದುಪ್ಟಟ್ಟಾಗಿರುವುದನ್ನು ಅವರೇ ಹೇಳಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಕಾಂಗ್ರೆಸ್‌ ಈ ಬಾ3ರಿ ಚುನಾವಣೆಯಲ್ಲಿ 50 ಸೀಟನ್ನು ಗೆಲ್ಲುವುದೂ ಕಷ್ಟ. ಜನ ಬಿಜೆಪಿ ಪರವಾಗಿರುವುದಾಗಿ ಹೇಳಿದ್ದಾರೆ. ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ ಕೋಟಿ ಕೋಟಿ ಹಣ ಕೊಟ್ಟು ಮತ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿರುವ ಮಹದೇವಪುರ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಗರ ಆಶ್ವಾಸನೆಗೆ ಬೆರಗಾಗದಿರಿ ಎಂದು ಮತದಾರರಿಗೆ ತಿಳಿಸಿದರು.
ಕಳೆದ ಐದು ವರ್ಷದ ಅಭಿವೃದ್ಧಿ ಕುರಿತ ಪ್ರತಿಗಳನ್ನು ಜನರಿಗೆ ತಲುಪಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ ಅವರು ವಾಮ ಮಾರ್ಗ ಹಿಡಿಯುವ ಕೆಲಸ ನಮ್ಮ ಪಕ್ಷದವರು ಮಾಡುವುದಿಲ್ಲ ಎಂದಿದ್ದಾರೆ.

Leave a Reply

Your email address will not be published.