ಬಿಜೆಪಿ ನಾಯಕರ ಮೇಲೆಯೇ ಸೇಡು ತೀರಿಸಿಕೊಳ್ಳುತ್ತಿದ್ದಾರಂತೆ ಯಡಿಯೂರಪ್ಪ !!

ಕಲಬುರಗಿ : ಬಿಜೆಪಿ ಅಭ್ಯರ್ಥಿಗಳು ಮೂರನೇ ಪಟ್ಟಿ ಶುಕ್ರವಾರ ಬಿಡುಗಡೆಯಾಗಿದ್ದು, ಅಸಮಾಧಾನ ಭುಗಿಲೆದ್ದಿದೆ. ಟಿಕೆಟ್‌ ಕೈ ತಪ್ಪಲು ಯಡಿಯೂರಪ್ಪನೇ ನೇರ ಹೊಣೆ ಎಂದು ಕಲಬುರಗಿಯ ಮಾಜಿ ಸಚಿವ ರೇವು ನಾಯಕ ಬೆಳಮಗಿ ಆರೋಪಿಸಿದ್ದಾರೆ.

ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಆಕಾಂಕ್ಷಿಯಾಗಿದ್ದ ರೇವುನಾಯಕ ಬೆಳಮಗಿಗೆ ಟಿಕೆಟ್ ಸಿಗದಿದ್ದಕ್ಕೆ ಯಡಿಯೂರಪ್ಪ ನೇರ ಹೊಣೆ ನಾನು ಕೆಜೆಪಿಗೆ ಹೋಗದ ಕಾರಣ ಯಡಿಯೂರಪ್ಪ ಸೇಡು ತಿರಿಸಿಕೊಂಡಿದ್ದಾರೆ. ಕೇಂದ್ರ ನಾಯಕರು ನನ್ನ ಹೆಸರು ಫೈನಲ್ ಮಾಡಿದ್ದರೂ, ಬಿಎಸ್‌ವೈ ಟಿಕೆಟ್‌ ತಪ್ಪಿಸಿದ್ದಾರೆ. ಯಾವ ಮಾನದಂಡದ ಮೇಲೆ ಟಿಕೆಟ್ ನೀಡಲಾಗಿದೆ ಯಡಿಯೂರಪ್ಪ ಉತ್ತರಿಸಲಿ. ಕಾಂಗ್ರೆಸ್ ಬಿಟ್ಟು ಈಗಷ್ಟೆ ಬಿಜೆಪಿಗೆ ಬಂದ ಕ್ರಿಕೆಟ್ ಬುಕ್ಕಿಗೆ ಟಿಕೆಟ್ ಯಾಕೆ ನೀಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ಬಾರಿ ಹಣ ಮತ್ತು ಸೇಡಿನ ರಾಜಕಾರಣ ಮಾಡಲಾಗಿದೆ. ಹಲವು ಪಕ್ಷದವರು ಸಂಪರ್ಕದಲ್ಲಿದ್ದಾರೆ. ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ನಡೆ ತಿಳಿಸುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com