ದೊಡ್ಡವರ ಜೊತೆ ಮಲಗದೇ ಮಹಿಳೆಯರು ಪತ್ರಕರ್ತರಾಗಲು ಸಾಧ್ಯವಿಲ್ಲ ಎಂದ BJP ನಾಯಕ!!

ಚೆನ್ನೈ : ಕನಿಮೋಳಿ ಬಗ್ಗೆ ಬಿಜೆಪಿ ನಾಯಕ ಎಚ್‌. ರಾಜಾ ಅವಹೇಳನಕಾರಿ ಹೇಳಿಕೆ ನೀಡಿದ್ದ ಬೆನ್ನಲ್ಲೇ ಮತ್ತೊಬ್ಬ ಬಿಜೆಪಿ ನಾಯಕ ಎಸ್‌.ವಿ ಶೇಖರ್‌ ಪತ್ರಕರ್ತೆಯಯರ ಬಗ್ಗೆ ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಹೇಳಿಕೆಯೊಂದನ್ನು ಪೋಸ್ಟ್‌ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಟಿ. ವಿಚಾನಲ್‌ಗಳಲ್ಲಿ ಕೆಲಸ ಮಾಡುವ ವರದಿಗಾರ್ತಿಯರು, ಆ್ಯಂಕರ್‌ಗಳಾಗಲು, ಮಾಧ್ಯಮಗಳಲ್ಲಿ ಕೆಲಸ ಪಡೆಯಲು ಕಂಪನಿಯ ಮಾಲೀಕರೊಂದಿಗೆ ಸಂಬಂಧ ಹೊಂದುತ್ತಾರೆ. ದೊಡ್ಡವರ ಜೊತೆ ಮಲಗದೆ ಕೆಲಸ ಗಿಟ್ಟಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಪೋಸ್ಟ್ ಮಾಡಿದ್ದರು. ಆದರೆ ಕೆಲ ನಿಮಿಷಗಳ ಬಳಿಕ ಅದನ್ನು ಡಿಲೀಟ್ ಮಾಡಿದ್ದರು. ಅಷ್ಟರೊಳಗೆ ಅದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ತಮಿಳುನಾಡು ಪತ್ರಕರ್ತರು ಈ ಬಗ್ಗೆ ಪ್ರತಿಭಟನೆ ನಡೆಸಲು ಮುಂದಾಗುತ್ತಿದ್ದಂತೆ ಶೇಖರ್‌ ಎಲ್ಲಾ ಪತ್ರಕರ್ತರಲ್ಲೂ ಕ್ಷಮೆ ಯಾಚಿಸಿದ್ದಾರೆ. ನಾನು ವಿಷಯ ಏನೆಂಬುದನ್ನು ತಿಳಿಯದೆ ಗೆಳೆಯನ ಪೋಸ್ಟನ್ನು ಫಾರ್ವಡ್‌ ಮಾಡಿದ್ದೆ. ಅದು ಕೆಟ್ಟದ್ದು ಎಂದು ತಿಳಿದ ಕೂಡಲೆ ತೆಗೆದು ಹಾಕಿದ್ದೇನೆ. ನನ್ನಿಂದ ಗೊತ್ತಿಲ್ಲದೇ ಆದ ತಪ್ಪಿಗೆ ಕ್ಷಮೆ ಇರಲಿ ಎಂದಿದ್ದಾರೆ.

ಇತ್ತೀಚೆಗಷ್ಟೇ  ತಮಿಳುನಾಡು ರಾಜ್ಯಪಾಲರು ಪತ್ರಕರ್ತೆಯೊಬ್ಬರು ಪ್ರಶ್ನೆ ಕೇಳಿದಾಗ ಅದಕ್ಕೆ ಉತ್ತರಿಸದೆ ಆಕೆಯ ಕೆನ್ನೆ ಸವರಿದ್ದರು. ಈ ಸಂಬಂಧ ಶೇಖರ್‌ ಪೋಸ್ಟ್ ಮಾಡಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com