IPL : RCB ಗೆ ಇಂದು ಡೆಲ್ಲಿ ಎದುರಾಳಿ : ಜಯಕ್ಕಾಗಿ ಕೊಹ್ಲಿ – ಗಂಭೀರ್ ಪಡೆಗಳ ಕಾದಾಟ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ರಾಯಲ್ ಚಾಲೆಂಜರ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳ ನಡುವೆ ಐಪಿಎಲ್ ಟಿ20 ಪಂದ್ಯ ನಡೆಯಲಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನಗಳಲ್ಲಿರುವ ಉಭಯ ತಂಡಗಳಿಗೆ ಜಯ ಅತ್ಯಗತ್ಯವಾಗಿದೆ.

ಆರ್ ಸಿಬಿ ತನ್ನ ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ 46 ರನ್ ಸೋಲನುಭವಿಸಿತ್ತು. ಡೆಲ್ಲಿ ತನ್ನ ಹಿಂದಿನ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 71 ರನ್ ಗಳಿಂದ ಪರಾಭವಗೊಂಡಿತ್ತು. ಆರ್ ಸಿಬಿ ಹಾಗೂ ಡೆಲ್ಲಿ ಎರಡೂ ತಂಡಗಳು 4 ಪಂದ್ಯಗಳಲ್ಲಿ 1 ಜಯ ಮಾತ್ರ ಸಾಧಿಸಿವೆ.

ಬೆಂಗಳೂರು ತಂಡ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿದೆ. ಕೊನೆಯ ಓವರುಗಳಲ್ಲಿ ಆರ್ ಸಿಬಿ ಬೌಲರ್ ಗಳು ಹೆಚ್ಚು ರನ್ ನೀಡಿ ದುಬಾರಿ ಎನಿಸಿದ್ದಾರೆ. ಸತತ ಸೋಲಿನ ಹಿನ್ನೆಲೆಯಲ್ಲಿ ಆರ್ ಸಿಬಿ ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ.

ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿರುವ ಸರ್ಫರಾಜ್ ಖಾನ್ ಬದಲು ಮುರುಗನ್ ಅಶ್ವಿನ್ ಅವರನ್ನು ಡೆಲ್ಲಿ ಎದುರು ಕಣಕ್ಕಿಳಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

 

One thought on “IPL : RCB ಗೆ ಇಂದು ಡೆಲ್ಲಿ ಎದುರಾಳಿ : ಜಯಕ್ಕಾಗಿ ಕೊಹ್ಲಿ – ಗಂಭೀರ್ ಪಡೆಗಳ ಕಾದಾಟ

Leave a Reply

Your email address will not be published.

Social Media Auto Publish Powered By : XYZScripts.com