ಕಾಂಗ್ರೆಸ್ ಪಕ್ಷ ಒಡೆದು ಆಳುವ ನೀತಿಯನ್ನು ಅನುಸರಿಸುತ್ತದೆ : ಶಿವರಾಜ್ ಸಿಂಗ್ ಚೌಹಾಣ್

ಚಿತ್ರದುರ್ಗ: ಮೊಳಕಾಲ್ಮೂರಿನಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿಕೆ ನೀಡಿದ್ದಾರೆ. ‘ ಶ್ರೀರಾಮುಲು ಅವರು ಭಾರಿ ಬಹುಮತದಿಂದ ಗೆಲ್ಲಲಿದ್ದಾರೆ. ಶ್ರೀರಾಮುಲು ಶಾಸಕರಾಗುವುದು ಖಚಿತ ಹಾಗೂ ಯಡಿಯೂರಪ್ಪ ಸಿಎಂ ಆಗುವುದು ಖಚಿತ. ಸಿದ್ದರಾಮಯ್ಯನವರ ಸರ್ಕಾರ ಜನ ವಿರೋಧಿ ಆಡಳಿತ ನಡೆಸಿದ್ದಾರೆ.

‘ ಬಡವರ, ರೈತರ ಸಮಸ್ಯೆಗಳನ್ನ ಪರಿಹರಿಸಲು ಸಂಪೂರ್ಣವಾಗಿ ಸೋತಿದೆ. ನರೇಂದ್ರ ಮೋದಿಯವರು ಕೇವಲ ಭಾರತದ ಮುಖ್ಯಮಂತ್ರಿಗಳು ಮಾತ್ರವಲ್ಲ. ಅವರು ಜಗತ್ತಿನ ನಾಯಕರು. ಯಡಿಯೂರಪ್ಪನವರನ್ನ ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿದ ದಿನದಿಂದ ಸಿದ್ದರಾಮಯ್ಯನವರು ಹೆದರಿದ್ದಾರೆ ‘

‘ ಕಾಂಗ್ರೆಸ್ ಪಕ್ಷ ಸಮಾಜವನ್ನ ಒಡೆಯುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಎಂದರೆ ಒಡೆದು ಆಳುವ ನೀತಿಯನ್ನು ಅನುಸರಿಸುತ್ತೆ. ಶ್ರೀರಾಮುಲು ಈ ಭಾಗದ ಜನರ ಸಮಸ್ಯೆಗಳನ್ನ ಬಗೆಹರಿಸುತ್ತಾರೆ ಎಂಬ ಭರವಸೆಯನ್ನ ನೀಡಲಿದ್ದೇನೆ.

‘ ಕರ್ನಾಟಕದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಸಿದ್ದರಾಮಯ್ಯನವರು 60 ಲಕ್ಷ ರೂಪಾಯಿಯ ಗಡಿಯಾರ ಕಟ್ತಾರೆ. ಇಂತವರು ಬಡವರ ಪರವಾಗಿ ಕೆಲಸ ಮಾಡ್ತಾರೆ ಅಂತಾ ಹೇಗೆ ಯೋಚ್ನೆ ಮಾಡ್ತೀರಿ. ಸಿದ್ದರಾಮಯ್ಯನವರ ಸರ್ಕಾರ ಭ್ರಷ್ಟಾಚಾರದಿಂದ ಕೂಡಿದೆ.

‘ ಯಡಿಯೂರಪ್ಪನವರ ಸರ್ಕಾರವನ್ನ ತಂದಿದ್ದೆ ಆದರೆ ದೇಶದಲ್ಲಿಯೇ ನಂ1 ರಾಜ್ಯವಾಗಲಿದೆ. ತಾವು ಶ್ರೀರಾಮಲು ಅವರನ್ನ ಗೆಲ್ಲಿಸಬೇಕು ಅಂತಾ ಮನವಿ ಮಾಡುತ್ತೇನೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com