6 ತಿಂಗಳ ಕಂದಮ್ಮನ ಮೇಲೆ ಅತ್ಯಾಚಾರ, ಕೊಲೆ : ರಕ್ತಸಿಕ್ತ ಶವ ನೋಡಿ ಕಣ್ಣೀರಿಟ್ಟ ಪೊಲೀಸರು

ಇಂದೋರ್‌ : ಮತ್ತೊಮ್ಮೆ ಇಡೀ ದೇಶವೇ ತಲೆತಗ್ಗಿಸುವಂತಹ ಘಟನೆ ನಡೆದಿದೆ. ಕಾಮುಕನ ಕಾಮದಾಹಕ್ಕೆ ಆರು ತಿಂಗಳ ಮಗು ಬಲಿಯಾಗಿರುವ ಘಟನೆ ಇಂದೋರ್‌ನ ರಾಜವಾಡ ಪ್ರದೇಶದಲ್ಲಿ ನಡೆದಿದೆ.

ಇಂದೋರ್‌ನ ಶಿವ ವಿಲಾಸ್‌ ಪ್ಯಾಲೆಸ್‌ನ ನೆಲಮಾಳಿಗೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ಮೆಟ್ಟಿಲುಗಳ ಮೇಲೆ ರಕ್ತದ ಕಲೆ ಸಹ ಇದ್ದು, ಮಗುವನ್ನು ಭೀಕರವಾಗಿ ನಡೆಸಿಕೊಂಡಿರುವುದಕ್ಕೆ ಸಾಕ್ಷಿಯಾಗಿದ್ದು, ಇದನ್ನು ನೋಡಿದ ಪೊಲೀಸರೇ ಕಣ್ಣೀರು ಹಾಕಿರುವುದಾಗಿ ತಿಳಿದುಬಂದಿದೆ.

ರಾಜವಾಡದ ಅಪಾರ್ಟ್‌ಮೆಂಟ್‌ನಲ್ಲಿ ಆರು ತಿಂಗಳ ಮಗು ತನ್ನ ತಂದೆ ತಾಯಿಯ ಜೊತೆ ಮಲಗಿತ್ತು. ಈ ವೇಳೆ ಪರಿಚಯಸ್ಥನೊಬ್ಬ ಮನೆಯೊಳಗೆ ನುಗ್ಗಿ ಯಾರಿಗೂ ಗೊತ್ತಿಲ್ಲದಂತೆ ಮಗುವನ್ನು ಅಪಹರಿಸಿದ್ದಾನೆ. ಬಳಿಕ ಮಗುವನ್ನು ನೆಲಮಾಳಿಗೆಗೆ ಕರೆದೊಯ್ದು ಅತ್ಯಾಚಾರ ನಡೆಸಿ, ಬಳಿಕ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮಗುವಿನ ಖಾಸಗಿ ಭಾಗಗಳಲ್ಲಿ ತೀವ್ರ ರಕ್ತಸ್ರಾವವಾಗಿದ್ದು, ಮಗುವಿನ ತಲೆಗೂ ಪೆಟ್ಟು ಬಿದ್ದಿದೆ. ಅತ್ಯಾಚಾರದ ಬಳಿಕ ಮಗುವನ್ನು ಎಸೆದಿರುವ ಸಾಧ್ಯತೆ ಇದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಮಗುವಿನ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಮಗುವಿನ ಮೇಲೆ ಅತ್ಯಾಚಾರವಾಗಿರುವುದು ಖಚಿತವಾಗಿದೆ. ಘಟನೆ

ಮಗುವಿನ ತಂದೆ ಹಾಗೂ ಆರೋಪಿ ಪರಿಚಯಸ್ಥರಾಗಿರುವುದಾಗಿ ತಿಳಿದುಬಂದಿದೆ. ಆರೋಪಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

2 thoughts on “6 ತಿಂಗಳ ಕಂದಮ್ಮನ ಮೇಲೆ ಅತ್ಯಾಚಾರ, ಕೊಲೆ : ರಕ್ತಸಿಕ್ತ ಶವ ನೋಡಿ ಕಣ್ಣೀರಿಟ್ಟ ಪೊಲೀಸರು

Leave a Reply

Your email address will not be published.