ದುಡ್ಡು ಕೊಟ್ಟೂ ಇಲ್ಲ, ತಂಗೊಂಡೂ ಇಲ್ಲ ಎಂದು ದೇವರೆದುರು ಆಣೆ ಮಾಡಿದ ಗಣಿನಾಡ MLA ಗಳು!

ಬಳ್ಳಾರಿ : ನಾನು ಯಾರಿಂದಲೂ ಹಣ ತೆಗೆದುಕೊಂಡಿಲ್ಲ ಎಂದು ಒಬ್ಬ ಶಾಸಕ, ನಾನು ಯಾರಿಗೂ ಹಣ ನೀಡಿಲ್ಲ ಎಂದು ಮತ್ತೊಬ್ಬ ಶಾಸಕ ಬಹಿರಂಗವಾಗಿ ದೇವರ ಮೇಲೆ ಆಣೆ ಮಾಡಿದ ಸಂಗತಿ ಬಳ್ಳಾರಿಯಲ್ಲಿ ನಡೆದಿದೆ.
ಜಿಲ್ಲೆಯ ಸಿರಗುಪ್ಪೆಯಲ್ಲಿ ಕೂಡ್ಲಿಗಿಯ ಪಕ್ಷೇತರ ಶಾಸಕ ನಾಗೇಂದ್ರ ಅವರ ಸೋದರಳಿಯ ಮುರಳಿ ಕೃಷ್ಣ ಅವರಿಗೆ ಕಾಂಗ್ರೆಸ್ ಟಿಕೆಟ್‌ ನೀಡಿದೆ. ಇದಕ್ಕೆ ಹಾಲಿ ಶಾಸಕ ಬಿ.ಎಂ ನಾಗರಾಜ್‌ ಆರು ಕೋಟಿ ರೂಗಳನ್ನು ಕೂಡ್ಲಿಗಿ ಶಾಸಕ ನಾಗೇಂದ್ರ ಅವರ ಬಳಿ ತೆಗೆದುಕೊಂಡು ಟಿಕೆಟ್ ಮಾರಿಕೊಂಡಿರುವುದಾಗಿ ಹೇಳಲಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ಇಂದು ಶಾಸಕ ನಾಗರಾಜ್‌ ನಾನು ಯಾರಿಂದಲೂ ಒಂದು ರೂಪಾಯಿ ಹಣವನ್ನೂ ತೆಗೆದುಕೊಂಡಿಲ್ಲ. ನನ್ನ ಟಿಕೆಟನ್ನು ನಾನು ಮಾರಿಕೊಂಡಿಲ್ಲ ಎಂದು ಸಿರಗುಪ್ಪದ ಮಾರಿಕಾಂಬ ಹಾಗೂ ದಡೇಸೂಗೂರಿನ ಆಲಂಬಾಷಾ ದರ್ಗಾದಲ್ಲಿ ಸಮಾಧಿ ಮೇಲೆ ಕೈಯಿಟ್ಟು ಪ್ರಮಾಣ ಮಾಡಿದ್ದಾರೆ. ಅದೇ ರೀತಿ ನಾಗೇಂದ್ರ ಸಹ ನಾನು ಯಾರಿಗೂ ಹಣ ನೀಡಿ ಟಿಕೆಟ್ ಪಡೆದಿಲ್ಲ ಎಂದು ಪ್ರಮಾಣ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com