ಅಮೂಲ್ಯ ಆಯ್ತು, ಶಶಿಕುಮಾರ್ ಆಯ್ತು, ಈಗ ತೆನೆಹೊತ್ತ ಮಳೆಹುಡುಗಿ ಪೂಜಾ ಗಾಂಧಿ

ರಾಜಕೀಯದಿಂದ ದೂರ ಉಳಿದಿದ್ದ ಮಳೆ ಹುಡುಗಿ ಪೂಜಾ ಗಾಂಧಿ ಚುನಾವಣೆಯ ಹೊತ್ತಿನಲ್ಲಿ ಮತ್ತೆ ಸದ್ದು ಮಾಡುತ್ತಿದ್ದಾರೆ. ಕಳೆದ ಬಾರಿ ಬಿಎಸ್‌ಆರ್‌ ಪಕ್ಷದಿಂದ ರಾಯಚೂರಿನಲ್ಲಿ ಕಣಕ್ಕಿಳಿದು ಠೇವಣಿ ಕಳೆದುಕೊಂಡಿದ್ದ ಪೂಜಾ ಈ ಬಾರಿ ತೆನೆ ಹೊರಲು ನಿರ್ಧರಿಸಿದ್ದಾರೆ.

ಇತ್ತೀಚಿಗೆ ಅಮೂಲ್ಯ ಜೆಡಿಎಸ್‌ ಸೇರ್ಪಡೆಯಾಗಿದ್ದು, ಇದಾದ ಬಳಿಕ ರಚಿತಾ ರಾಂ ಸಹ ಜೆಡಿಎಸ್‌ಗೆ ಮತ ಹಾಕಿ ಎಂದು ಸೋಶಿಯಲ್‌ ಮೀಡಿಯಾದಲ್ಲಿ  ಪ್ರಚಾರ ಮಾಡಿದ್ದರು. ಈಗ ಮತ್ತೊಬ್ಬ ಸ್ಟಾರ್‌ ನಟಿ ಪೂಜಾಗಾಂಧಿ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ. ಶನಿವಾರ ಮದ್ಯಾಹ್ನ, ಬೆಂಗಳೂರಿನ ಜೆಡಿಎಸ್‌ ಕಚೇರಿಯಲ್ಲಿ ಪೂಜಾ ಗಾಂಧಿಯನ್ನು  ಜೆಡಿಎಸ್‌ ಕಾರ್ಯಾಧ್ಯಕ್ಷ ಪಿಜಿಆರ್‌ ಸಿಂಧ್ಯಾ ಸ್ವಾಗತಿಸಲಿದ್ದಾರೆ.

4 thoughts on “ಅಮೂಲ್ಯ ಆಯ್ತು, ಶಶಿಕುಮಾರ್ ಆಯ್ತು, ಈಗ ತೆನೆಹೊತ್ತ ಮಳೆಹುಡುಗಿ ಪೂಜಾ ಗಾಂಧಿ

Leave a Reply

Your email address will not be published.

Social Media Auto Publish Powered By : XYZScripts.com