shivamogga : ಅಕ್ಕ-ತಂಗಿ ಮಧ್ಯೆ ಜಗಳ : ಮನನೊಂದು ವಿಷ ಕುಡಿದ ಸಹೋದರಿ

ಶಿವಮೊಗ್ಗ : ಅಕ್ಕ ತಂಗಿಯರಿಬ್ಬರೂ ಜಗಳವಾಡಿಕೊಂಡು ಬಳಿಕ ತಂಗಿ ವಿಷಸೇವಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಕೆಲ ದಿನಗಳ ಹಿಂದೆ ಅಕ್ಕ ಸುಧಾಳ ಗಂಡ ಎಸಿಬಿ ಬಲೆಗೆ ಬಿದ್ದಿದ್ದರು. ಈ ವಿಚಾರ ಯಾರಿಗೂ ತಿಳಿದಿರಲಿಲ್ಲ. ಆದರೆ ತಂಗಿ ರೇಖಾ ಈ ವಿಚಾರವನ್ನು ಬೇರೆಯವರಿಗೆ ತಿಳಿಸಿದ್ದರು. ಇದೇ ಕಾರಣಕ್ಕೆ ಅಕ್ಕ ತಂಗಿಯರಿಬ್ಬರ ಮಧ್ಯೆ ಕಳೆದ ಒಂದು ವಾರದಿಂದ ಜಗಳ ನಡೆಯುತ್ತಿತ್ತು. ಈ ವೇಳೆ ಅಕ್ಕ ಸುಧಾ, ತಂಗಿ ರೇಖಾಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ಹಿನ್ನೆಲೆಯಲ್ಲಿ ಸುಧಾ ವಿರುದ್ಧ ದೂರು ನೀಡಲು ಬಂದ ರೇಖಾ ಇಂದು ಬೆಳಗ್ಗೆ ಶಿವಮೊಗ್ಗ ಎಸ್‌ಪಿ ಕಚೇರಿಯ ಎದುರೇ ವಿಷ ಸೇವಿಸಿದ್ದಾರೆ.

ಕೂಡಲೆ ಅವರನ್ನು ಸಮೀಪದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆಸ್ಪತ್ರೆಗೆ ಎಸ್‌ಪಿ ಅಭಿನವ್‌ ಖರೆ ಭೇಟಿ ನೀಡಿದ್ದು, ರೇಖಾ ಆರೋಗ್ಯ ವಿಚಾರಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com