ತಂದೆಯಿಂದಲೇ ಲೈಂಗಿಕ ದೌರ್ಜನ್ಯ : ಮನನೊಂದು ನೇಣಿಗೆ ಶರಣಾದ ನತದೃಷ್ಟ ಮಗಳು

ಪಾಟ್ನಾ : ಹೆತ್ತಪ್ಪನೇ ತನ್ನ 13 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಹಿನ್ನೆಲೆಯಲ್ಲಿ ಮನನೊಂದ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬಿಹಾರದ ಮಜ್‌ಹೌಲಿಯಾ ಪ್ರದೇಶದಲ್ಲಿ ನಡೆದಿದೆ.

ಪ್ರಕರಣ ಸಂಬಂಧ ತಂದೆಯನ್ನು ಪೊಲೀಸರು ಬಂಧಿಸಿದ್ದು, ವಿಚಾರಮೆ ನಡೆಸಲಾಗುತ್ತಿದೆಎಂದು ಪೊಲೀಸ್‌ ಹಿರಿಯ ಅಧಿಕಾರಿ ಜಯಂತ್‌ ಕಾಂತ್‌ ತಿಳಿಸಿದ್ದಾರೆ. ಜೊತೆಗೆ ಬಂಧಿತ ವ್ಯಕ್ತಿ ಮಗಳ ಜೊತೆ ಅಶ್ಲೀಲವಾಗಿ ವರ್ತಿಸುತ್ತಿದ್ದುದನ್ನು ಗ್ರಾಮದ ಕೆಲವರು ನೋಡಿದ್ದರು ಎಂದೂ ತಿಳಿದುಬಂದಿದೆ.

ಪ್ರಕರಣ ಸಂಬಂಧ ಬಾಲಕಿ ಹಾಗೂ ಆಕೆಯ ತಾಯಿ ಒಂದು ವಾರದ ಹಿಂದಷ್ಟೇ ಗ್ರಾಮ ಪಂಚಾಯ್ತಿ ಮುಖಂಡರನ್ನು ಸಂಪರ್ಕಿಸಿದ್ದರು. ಅಲ್ಲದೆ ಸ್ಥಳೀಯ ಪೊಲೀಸ್‌ ಠಾಣೆಗೂ ಈ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ತಂದೆಯ ಕೃತ್ಯದಿಂದ ಬೇಸತ್ತು ಬಾಲಕಿ ಮನೆ ಬಿಟ್ಟು ಹೋಗಿದ್ದಳು. ಆದರೆ ಮತ್ತೆ ಆಕೆಯನ್ನು ಮನೆಗೆ ಕರೆತರಲಾಗಿತ್ತು. ಆದರೆ ತಂದೆಯ ವರ್ತನೆ ಮುಂದುವರಿದಾಗ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Leave a Reply

Your email address will not be published.