ಜಗದೀಶ್ ಶೆಟ್ಟರ್‌ನಂತ ಭ್ರಷ್ಟರು ರಾಜಕೀಯದಲ್ಲಿ ಇರಬಾರದು ಎಂದ S.R ಹಿರೇಮಠ್‌

ರಾಯಚೂರು : ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಗೆ ಸಂಕಷ್ಟ ಎದುರಾಗಿದೆ. ಶೆಟ್ಟರ್‌ ವಿರುದ್ದ ಜನ ಸಂಗ್ರಾಮ ಪರಿಷತ್‌ ಸಂಚಾಲಕ ಎಸ್.ಆರ್.ಹಿರೇಮಠ್ ದಾಖಲೆ ರಿಲೀಸ್ ಮಾಡಿದ್ದಾರೆ.

ಜಗದೀಶ್ ಶೆಟ್ಟರ್‌ ವಿರುದ್ದ ದಾಖಲೆ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅವರು, ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ಭೂಮಿ ಕಬಳಿಸಿದ್ದಾರೆ. ಶ್ರೀಮಂತರ ಅನುಕೂಲಕ್ಕಾಗಿ ಸರ್ಕಾರಿ ಭೂಮಿ ಕಬಳಿಸಿ ರಿಕ್ರೇಯೆಷನ್ ಕ್ಲಬ್ ಮಾಡಿದ್ದಾರೆ. 2009ರಲ್ಲಿ ಡಿಸಿ ದರ್ಪಣ ಜೈನ್ ಕ್ಲಬ್ ಗಾಗಿ ಭೂಮಿ ನೀಡಲು ಪ್ರಸ್ತಾವನೆ ಸಲ್ಲಿಸಿದ್ದರು. 2012ರಲ್ಲಿ ಸಿಎಂ ಜಗದೀಶ ಶೆಟ್ಟರ್ ರಿಕ್ರೇಯೆಷನ್ ಕ್ಲಬ್ ಗೆ ಭೂಮಿ ನೀಡಿದ್ದಾರೆ . ಈ ಬಗ್ಗೆ ತನಿಖೆ ಮಾಡಲು ಈಗಿನ ಸರಕಾರಕ್ಕೆ ಒತ್ತಾಯಿಸಿದರೂ ತನಿಖೆ ಮಾಡಿಲ್ಲ.  ಹುಬ್ಬಳ್ಳಿ ಏರ್ ಪೋರ್ಟಿಗಾಗಿ 600 ಎಕರೆ ಭೂಮಿ ಬೇಡಿಕೆ ಇಟ್ಟಿದ್ದಾರೆ. ಏರ್ ಪೋರ್ಟಿಗೆ ಬೇಕಾಗುವಷ್ಟು ಭೂಮಿ‌ ನೀಡಿ ಉಳಿದದ್ದನ್ನು ಖಾಸಗಿಯವರಿಗೆ ನೀಡಿರುವುದಾಗಿ ಆರೋಪಿಸಿದ್ದಾರೆ.

ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಸದನದ ಭರವಸೆ ಸಮಿತಿಯಲ್ಲಿ ರೈತರ ಭೂಮಿ ವಾಪಸ್ಸು ನೀಡಲು ಹೇಳಿದ್ದಾರೆ. ದೇಶಪಾಂಡೆ ಫೌಂಡೆಷನ್ ಹಾಗೂ ಅನಂತ ರೆಸಿಡೆನ್ಸಿಗೆ ನಿಯಮ ಬಾಹಿರವಾಗಿ ಭೂಮಿ ನೀಡಿದ್ದಾರೆ. ಇಂತಹ ಭ್ರಷ್ಟರು ಸಾರ್ವಜನಿಕ ಜೀವನದಲ್ಲಿ ಇರಬಾರದು. ಅವರು ರಾಜಕೀಯದಿಂದ ನಿವೃತ್ತಿ ಹೊಂದಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published.