ವೀರೂ ಭೇಟಿಯಾದ 93 ವರ್ಷದ ಅಭಿಮಾನಿ : ಹಿರಿಯಜ್ಜನ ಪ್ರೀತಿಗೆ ಭಾವುಕರಾದ ಸೆಹ್ವಾಗ್

ಮಾಜಿ ಕ್ರಿಕೆಟಿಗ, ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸಮನ್ ವೀರೇಂದ್ರ ಸೆಹ್ವಾಗ್ ತಮ್ಮ ಸ್ಫೋಟಕ ಬ್ಯಾಟಿಂಗ್ ಗೆ ಹೆಸರಾದವರು. ನಜಾಫ್ ಗಢದ ಸಚಿನ್ ಎಂದೇ ಖ್ಯಾತಿಯಾಗಿರುವ ವೀರೇಂದ್ರ ಸೆಹ್ವಾಗ್, ಜಗತ್ತಿನಾದ್ಯಂತ ಅಸಂಖ್ಯ ಅಭಿಮಾನಿಗಳನ್ನು ಹೊಂದಿದ್ದಾರೆ.

ಪಂಜಾಬಿನ ಪಟಿಯಾಲಾ ನಿವಾಸಿಯಾದ 93 ವರ್ಷ ವಯಸ್ಸಿನ ಓಂ ಪ್ರಕಾಶ್ ಎಂಬ ಅಭಿಮಾನಿಯೊಬ್ಬರು ಚಂಡೀಗಢದಲ್ಲಿ ಸೆಹ್ವಾಗ್ ಅವರನ್ನು ಭೇಟಿಯಾಗಿದ್ದಾರೆ. ಹಿರಿಯ ಅಭಿಮಾನಿಯ ಪ್ರೀತಿಯನ್ನು ಕಂಡು ಭಾವುಕರಾದ ಸೆಹ್ವಾಗ್ ಅಪ್ಪಿಕೊಂಡು ಅಭಿಮಾನಿಯ ಸಂತಸಕ್ಕೆ ಕಾರಣರಾಗಿದ್ದಾರೆ. ನಂತರ ತಮ್ಮ ಅಭಿಮಾನಿಯ ಪಾದ ಮುಟ್ಟಿ ನಮಸ್ಕರಿಸಿದ ಸೆಹ್ವಾಗ್, ಹಿರಿಯಜ್ಜನಿಂದ ಆಶೀರ್ವಾದವನ್ನು ಪಡೆದಿದ್ದಾರೆ.

Image result for sehwag fan 93

Image result for sehwag fan 93

ಈ ಹಿರಿಯ ಅಭಿಮಾನಿಯ ಅಪರೂಪದ ಭೇಟಿಯ ಫೋಟೊಗಳನ್ನು ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ ವೀರೇಂದ್ರ ಸೆಹ್ವಾಗ್ ಹಂಚಿಕೊಂಡಿದ್ದಾರೆ.

 

 

 

Leave a Reply

Your email address will not be published.