ಒಂದೇ ಒಂದು ತುಂಡಾದ ಸೂಜಿಯಿಂದ ಮಗುವಿನ ಪ್ರಾಣವನ್ನೇ ತೆಗೆದ ವೈದ್ಯ !!

ಕೋಲಾರ : ವೈದ್ಯರ ನಿರ್ಲಕ್ಷ್ಯದಿಂದಾಗಿ 10 ದಿನದ ಗಂಡು ಮಗು ಮೃತಪಟ್ಟ ಘಟನೆ ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಮಾಲೂರಿನ ಮಾಸ್ತಿ ಹೋಬಳಿಯ ಪ್ರವೀಣ್ ಹಾಗೂ ಶೈಲಜಾ ದಂಪತಿಗೆ 10 ದಿನದ ಹಿಂದೆ ಗಂಡು ಮಗು ಜನಿಸಿತ್ತು. ಈ ಮಗುವಿಗೆ ಹುಟ್ಟಿದ ಕೂಡಲೇ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇಂಜೆಕ್ಷನ್‌ ನೀಡುವ ವೇಳೆ ಸೂಜಿ ತುಂಡಾಗಿದೆ. ತುಂಡಾದ ಸೂಜಿ ಮಗುವಿನ ದೇಹದಲ್ಲೇ ಬಿಟ್ಟರೆ ತೊಂದರೆ ಎಂಬುದನ್ನು ತಿಳಿದಿದ್ದರೂ ಸೂಜಿ ಹೊರತೆಗೆಯದೆ ಹಾಗೆಯೇ ಬಿಟ್ಟಿದ್ದಾರೆ. ಇದರಿಂದಾಗಿ ಕಳೆದ ಏಳು ದಿನದಿಂದ ಮಗುವಿಗೆ ಜ್ವರ ಬಂದಿದ್ದು, ಹೆಚ್ಚಿನ ಚಿಕಿತ್ಸೆಗೆ ಕೋಲಾರ ಆಸ್ಪತ್ರೆಗೆ ಮಗುವನ್ನು ಕರೆತರಲಾಗಿದೆ. ಈ ವೇಳೆ ಮಗುವಿನ ದೇಹದಲ್ಲಿ ಸೂಜಿ ತುಂಡಾಗಿರುವುದು ಪತ್ತೆಯಾಗಿದೆ.

ಕೂಡಲೆ ಜಿಲ್ಲಾಸ್ಪತ್ರೆಯ ವೈದ್ಯರು ಸೂಜಿಯನ್ನು ಹೊರತೆಗೆದಿದ್ದು, ಆದರೂ ಮಗು ಸಾವಿಗೀಡಾಗಿದೆ. ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಮೃತಪಟ್ಟಿರುವುದಾಗಿ ಪೋಷಕರು ಆರೋಪಿಸಿದ್ದು, ಕುಟುಂಬಸ್ಥರ ರೋಧನೆ ಮುಗಿಲುಮುಟ್ಟಿದೆ.

ಘಟನೆ ಸಂಬಂಧ ಮಾಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com