‘ ನಾನು ಮುಖ್ಯಮಂತ್ರಿ ಆಗುತ್ತೇನೆ ಅಂತ ಎಲ್ಲೂ ಹೇಳಿಲ್ಲ ‘ : ಡಿ.ಕೆ ಸುರೇಶ್ ಹೇಳಿಕೆಗೆ HDK ಟಾಂಗ್

ರಾಮನಗರದ ಚಾಮುಂಡೇಶ್ವರಿ ದೇವಸ್ಥಾನ ದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪೂಜೆ ಸಲ್ಲಿಸಿದ್ದಾರೆ. ನಂತರ ದರ್ಗಾ ಮತ್ತು ಚರ್ಚ್ ಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಬಳಿಕ ಮಾತನಾಡಿದ ಕುಮಾರಸ್ವಾಮಿ ‘ ಪಕ್ಷದ ಕಾರ್ಯಕರ್ತರ ಒತ್ತಾಯದ ಮೇಲೆ ರಾಮನಗರ ವಿಧಾನಸಭಾ ಕ್ಷೇತ್ರದ ಜೊತೆ ಚನ್ನಪಟ್ಟಣ ದಲ್ಲಿ ಕೂಡಾ ನಾಮಪತ್ರ ಸಲ್ಲಿಸುತ್ತಿದ್ದೇನೆ. ರಾಜ್ಯದ ಜನರ ನಾಡಿಮಿಡಿತದ ಪ್ರಕಾರ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ. ಇಪ್ಪತ್ತೈದು ಸ್ಥಾನ ಗೆಲ್ಲಲೂ ಆಗದವರು ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಾರೆ ಅಂತಾ ಲಘುವಾಗಿ ಮಾತನಾಡಿದ್ದಾರೆ ‘ ಎಂದಿದ್ದಾರೆ.

Image result for hd kumaraswamy

‘ ನಾನು ಎಲ್ಲೂ ಮುಖ್ಯಮಂತ್ರಿ ಆಗುತ್ತೇನೆ ಅಂತಾ ಹೇಳಿಲ್ಲ. ನಾಡಿನ ಸೇವೆ ಮಾಡುವ ಅವಕಾಶ ಜನ ನೀಡುತ್ತಾರೆ ಅನ್ನೊ ನಂಬಿಕೆ ಇದೆ. ನನಗೆ ಮುಖ್ಯಮಂತ್ರಿ ಗಳ ಸರ್ಟಿಫಿಕೇಟ್ ಬೇಕಿಲ್ಲ. ಯಾರು ನಮ್ಮನ್ನು ಆಳಬೇಕು ಅಂತಾ ನಾಡಿನ ಜನ ತೀರ್ಮಾನ ಮಾಡುತ್ತಾರೆ ‘ ಎಂದು ಡಿಕೆ ಸುರೇಶ್ ಹೇಳಿಕೆ ಟಾಂಗ್ ಕೊಟ್ಟಿದ್ದಾರೆ.

ಚನ್ನಪಟ್ಟಣ ಕ್ಷೇತ್ರದ ಚುನಾವಣೆಯಲ್ಲಿ ಒಂದು ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯ ಬೇಕೆಂದು ಕಾರ್ಯಕರ್ತರಿಗೆ ಸುರೇಶ್ ಡಿ.ಕೆ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ‘ ಅವರು ಒಂದು ಕಲ್ಲಿನಲ್ಲಿ ಎರಡು ಹಕ್ಕಿ ಬೇಕಾದರೂ ಹೊಡೆಯಲ್ಲಿ ಇಪ್ಪತ್ತು ಬೇಕಾದರೂ ಹೊಡೆಯಲಿ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com