ರಗಡ್‌ ಲುಕ್‌ನಲ್ಲಿ ಶಿವಣ್ಣ : ರಿಲೀಸ್‌ ಆಯ್ತು ಸೆಂಚುರಿ ಸ್ಟಾರ್‌ನ “ರುಸ್ತುಂ” ಪೋಸ್ಟರ್‌

ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್ ಅಭಿನಯದ ಟಗರು ಸಿನಿಮಾ ಭಾರೀ ಹವಾ ಸೃಷ್ಠಿಸಿತ್ತು. ಬಿಡುಗಡೆಯಾಗಿ 50 ದಿನದ ಬಳಿಕವೂ ಟಗರು ತನ್ನ ಪೊಗರನ್ನು ಬಿಟ್ಟುಕೊಡದೆ ಮುಂದುವರಿದಿದ್ದು, ಈ ಯಶಸ್ಸಿನ ಬೆನ್ನಲ್ಲೇ ಶಿವಣ್ಣ ಮತ್ತೊಂದು ಸಿನಿಮಾದ ತಯಾರಿಯಲ್ಲಿದ್ದಾರೆ.

ಹೌದು ಶಿವರಾಜ್‌ ಕುಮಾರ್‌ ರುಸ್ತುಂ ಚಿತ್ರದ ಸಿದ್ದತೆಯಲ್ಲಿದ್ದು, ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ. ಇಂದು ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಈ ಸಿನಿಮಾಗೆ ಅನುಪ್‌ ಸೀಳಿನ್‌ ಸಂಗೀತ ನಿರ್ದೇಶನವಿದೆ ಎಂದು ತಿಳಿದುಬಂದಿದೆ. ಸಿನಿಮಾದಲ್ಲಿ ಸಕತ್‌ ಸಾಹಸಗಳನ್ನು ಮಾಡಲು ರವಿವರ್ಮ ಸಿದ್ಧತೆ ನಡೆಸಿದ್ದಾರೆ. ರುಸ್ತುಂ ಸಿನಿಮಾವನ್ನು ಜಯಣ್ಣ-ಭೋಗೇಂದ್ರ ಅವರು ನಿರ್ಮಾಣ ಮಾಡುತ್ತಿದ್ದು, ಸದ್ಯ ಚಿತ್ರತಂಡ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com