CJI ದೀಪಕ್‌ ಮಿಶ್ರಾ ಪದಚ್ಯುತಿ ನಿಲುವಳಿ ಮಂಡನೆಗೆ ಒಂದಾದ ವಿರೋಧ ಪಕ್ಷಗಳು

ದೆಹಲಿ : ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ವಿರುದ್ದ ಪದಚ್ಯುತಿ ನಿಲುವಳಿ ಮಂಡಿಸಲು ಕಾಂಗ್ರೆಸ್‌ ನೇತೃತ್ವದ ವಿರೋಧ ಪಕ್ಷಗಳು ಸಿದ್ಧತೆ ನಡೆಸಿರುವುದಾಗಿ ತಿಳಿದುಬಂದಿದೆ.
ಈ ಸಂಬಂಧ ಸದ್ಯದಲ್ಲೇ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.
ಅಮಿತ್ ಶಾ ಭಾಗಿಯಾಗಿದ್ದರೆನ್ನಲಾದ ಸೊಹ್ರಾಬುದ್ದೀನ್‌ ಎನ್‌ಕೌಂಟರ್‌ ಕೇಸ್‌ನಲ್ಲಿ ಸಾವಿಗೀಡಾಗಿದ್ದ ಸಿಬಿಐ ವಿಶೇಷ ನ್ಯಾಯಮೂರ್ತಿ ಲೋಯಾ ಅವರ ಸಾವಿನ ಕುರಿತು ಸ್ವತಂತ್ರ್ಯ ತನಿಖೆ ಅಗತ್ಯವಿಲ್ಲ. ಎಲ್ಲವನ್ನು ಅನುಮಾನದಿಂದ ನೋಡಲು ಸಾಧ್ಯವಿಲ್ಲ. ಲೋಯಾ ಅವರದ್ದು ಸಹಜ ಸಾವು ಎಂದು ನಿನ್ನೆಯಷ್ಟೇ ನ್ಯಾ. ದೀಪಕ್‌ ಮಿಶ್ರಾ ನೇತೃತ್ವದ ಪೀಠ ತೀರ್ಪು ನೀಡಿತ್ತು. ಇದಾದ ಬಳಿಕ ಪ್ರಕರಣ ತೀವ್ರತೆ ಪಡೆದುಕೊಂಡಿದ್ದು, ದೀಪಕ್‌ ಮಿಶ್ರಾ ವಿರುದ್ದ ಪದಚ್ಯುತಿ ನಿಲುವಳಿ ಮಂಡಿಸಲು ವಿಪಕ್ಷಗಳು ನಿರ್ಧರಿಸಿವೆ.
 ಈ ಬಗ್ಗೆ ಕಾಂಗ್ರೆಸ್‌ ವಕ್ತಾರ ರಂದೀಪ್‌ ಸುರ್ಜೇವಾಲಾ  ಪ್ರತಿಕ್ರಿಯಿಸಿದ್ದು, ನಮಗೆ ಸುಪ್ರೀಂಕೋರ್ಟ್‌ ಬಗ್ಗೆ ಗೌರವವಿದೆ. ಆದರೆ ನ್ಯಾ. ಲೋಯಾ ಅವರ ಸಾವಿನ ಕುರಿತು ತೀರ್ಪನ್ನು ನಾವು ಒಪ್ಪಿಕೊಳ್ಳುವುದಿಲ್ಲ.  ಲೋಯಾ ಸಾವಿನ ಕುರಿತು ಸರಿಯಾದ ತನಿಖೆ ನಡೆಯಬೇಕು. ಅಮಿತ್ ಶಾಗೆ ದೀಪಕ್‌ ಮಿಶ್ರಾ ಅವರೇ ಕ್ಲೀನ್‌ ಚಿಟ್‌ ನೀಡಿದ್ದಾರೆ. ಆದರೆ ತನಿಖೆ ನಡೆಯದೆ ಕ್ಲೀನ್‌ ಚಿಟ್‌ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ದೀಪಕ್‌ ಮಿಶ್ರಾ ಅವರ ಪದಚ್ಯುತಿಗೆ 7 ಪಕ್ಷಗಳು ಬೆಂಬಲಿಸಿರುವುದಾಗಿ ತಿಳಿದುಬಂದಿದೆ.

One thought on “CJI ದೀಪಕ್‌ ಮಿಶ್ರಾ ಪದಚ್ಯುತಿ ನಿಲುವಳಿ ಮಂಡನೆಗೆ ಒಂದಾದ ವಿರೋಧ ಪಕ್ಷಗಳು

Leave a Reply

Your email address will not be published.

Social Media Auto Publish Powered By : XYZScripts.com