ಗದಗ : ನರಗುಂದದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ

ಗದಗ : ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಕಾಂಗ್ರೆಸ್ ಹಾಲಿ ಶಾಸಕ ಬಿ.ಆರ್ ಯಾವಗಲ್ ಪುತ್ರರು ಹಾಗೂ ಬೆಂಬಲಿಗರು ಮತ್ತು ಬಿಜೆಪಿ ಅಭ್ಯರ್ಥಿ ಸಿ‌.ಸಿ ಪಾಟೀಲ್ ಪುತ್ರರು ಹಾಗೂ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ.

ನರಗುಂದ ಪಟ್ಟಣದ ಕಾಂಗ್ರೆಸ್ ಮುಖಂಡ ರಾಜು‌ ಕಲಾಲ ಎಂಬುವರ ಹೋಟೆಲ್ (ಡಾಬಾ) ದಲ್ಲಿ ಘಟನೆ ನಡೆದಿದೆ. ಮಧ್ಯರಾತ್ರಿವರೆಗೂ ಡಾಬಾ ತೆಗೆದು ಮತದಾರರಿಗೆ ಊಟ ಹಾಗೂ ಡ್ರಿಂಕ್ಸ್ ನೀಡುತ್ತಿದ್ದ ಆರೋಪ ಕೇಳಿ ಬಂದಿದೆ.

ಊಟದ ನೆಪದಲ್ಲಿ ಬಂದು ಜಗಳ ಮಾಡಿ ಹಲ್ಲೆಮಾಡಿ, ಡಾಬಾ ಧ್ವಂಸ ಮಾಡಿದ್ದಾರೆ ಎಂದು ಕಾಂಗ್ರೆಸಿಗರ ಆರೋಪವಾಗಿದೆ. ಎರಡೂ ಪಕ್ಷದ ಕಾರ್ಯಕರ್ತರರಿಗೆ ಗಾಯಗಳಾಗಿದ್ದು, ನರಗುಂದ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬಿಜೆಪಿ ಅಭ್ಯರ್ಥಿ ಸಿ ಸಿ ಪಾಟೀಲ್ ಹಾಗೂ ಮಕ್ಕಳು ಮುಂದು ನಿಂತು ಗಲಾಟೆ ಮಾಡಿದ್ದಾರೆ ಅಂತ ರಾಜು ಕಲಾಲ ಆರೋಪ ಹೊರಿಸಿದ್ದಾರೆ. ಶಾಸಕ ಬಿ ಆರ್ ಯಾವಗಲ್ ಪುತ್ರ ಸಂತೋಷ, ಪ್ರವೀಣ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ಬಿಜೆಪಿ ಆರೋಪ ಮಾಡಿದೆ.

ಗದಗ ಜಿಲ್ಲೆ ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

Leave a Reply

Your email address will not be published.