ಮದುವೆಯಾಗ್ತೀನಿ ಬಾ ಅಂತ ನಂಬಿಸಿ ಮಂಚಕ್ಕೆ ಕರೆದ ಭೂಪ….ಎಲ್ಲಾ ಮುಗಿದ ಬಳಿಕ ಆಗಿದ್ದೇನು ?

ಬೆಂಗಳೂರು : ಮುಂಬೈನಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬಳ ಸ್ನೇಹ ಬೆಳೆಸಿ ಬಳಿಕ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೆಲಸ ಹುಡುಕಿಕೊಂಡು ಮುಂಬೈ ಮೂಲದ ಯುವತಿಯೊಬ್ಬಳು ಬೆಂಗಳೂರಿಗೆ ಬಂದಿದ್ದಳು. ಈ ವೇಳೆ ಆಕೆಯ ಸ್ನೇಹ ಮಾಡಿಕೊಂಡ ಇಂಜಮಾಮ್‌ ಉಲ್‌ ಹಕ್‌ ಎಂಬಾತ ಆಕೆಯನ್ನು ಪ್ರೀತಿಸುವ ನಾಟಕವಾಡಿದ್ದ. ಬಳಿಕ ಆಕೆಯನ್ನು ಮದುವೆಯಾಗುವುದಾಗಿ ಹೇಳಿ ಪದೇ ಪದೇ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ. ಯುವತಿ ಗರ್ಭಿಣಿಯಾದ ಹಿನ್ನೆಲೆಯಲ್ಲಿ ಆಕೆ ತನ್ನನ್ನು ಮದುವೆಯಾಗುವಂತೆ ಇಂಜಮಾಮ್‌ನಲ್ಲಿ ಒತ್ತಾಯಿಸಿದ್ದಾಳೆ. ಆತ ಮದುವೆಗೆ ಒಪ್ಪದಿದ್ದಾಗ ಪೋಷಕರಿಗೆ ಮಾಹಿತಿ ತಿಳಿಸಿದ್ದು, ಪೋಷಕರೂ ಆಕೆಯನ್ನು ಮನೆಗೆ ಸೇರಿಸದೆ ಬೆದರಿಕೆ ಹಾಕಿ ಕಳುಹಿಸಿದ್ದಾರೆ.

ಪೋಷಕರಿಗೆ ವಿಷಯ ತಿಳಿಸಿದ ಹಿನ್ನೆಲೆಯಲ್ಲಿ ಇಂಜಮಾಮ್‌, ಯುವತಿಗೆ ಥಳಿಸಿ, ಬೆದರಿಕೆ ಹಾಕಿದ್ದಲ್ಲದೆ, ಸಿಗರೇಟ್‌ನಿಂದ ಸುಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಯುವತಿ ಪೊಲೀಸರ ಮೊರೆ ಹೋಗಿದ್ದು ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

One thought on “ಮದುವೆಯಾಗ್ತೀನಿ ಬಾ ಅಂತ ನಂಬಿಸಿ ಮಂಚಕ್ಕೆ ಕರೆದ ಭೂಪ….ಎಲ್ಲಾ ಮುಗಿದ ಬಳಿಕ ಆಗಿದ್ದೇನು ?

  • April 20, 2018 at 9:05 PM
    Permalink

    please hang him

    Reply

Leave a Reply

Your email address will not be published.

Social Media Auto Publish Powered By : XYZScripts.com