ಬಿಜೆಪಿಯ ಅಭಿವೃದ್ಧಿ ನೋಡಿ ಕಾಂಗ್ರೆಸ್‌ನವರು ಅಲ್ಲಾಡಿ ಹೋಗಿದ್ದಾರೆ : ಅನಂತ್‌ ಕುಮಾರ್‌ ಹೆಗಡೆ

ಹಳಿಯಾಳ : ಕರ್ನಾಟಕ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಸಿದ್ದರಾಮಯ್ಯ ಸರ್ಕಾರ ಇದುವರೆಗೂ ಏನೂ ಮಾಡಿಲ್ಲ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದಲ್ಲಿ ಮಾತನಾಡಿದ ಅವರು,  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.  ಭ್ರಷ್ಟಾಚಾರ ಮಿತಿ ಮೀರಿದ್ದು ಅಭಿವೃದ್ದಿ ಸಂಪೂರ್ಣ ನಿಂತು ಹೋಗಿದೆ.ಇದನ್ನೇ ಮಾನದಂಡವನ್ನಾಗಿಟ್ಟುಕೊಂಡು ಚುನಾವಣೆ ಎದುರಿಸುವುದಾಗಿ ಹೇಳಿದ್ದಾರೆ.

ಹಳಿಯಾಳ ಪಟ್ಟಣದಲ್ಲಿ ಅಭ್ಯರ್ಥಿ ಸುನಿಲ್ ಹೆಗಡೆ ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅನಂತ್ ಕುಮಾರ್ ಹೆಗಡೆ, ಸಿದ್ದರಾಮಯ್ಯ ಹಣ ತಂದಿದ್ದೇನೆ ಅಂತಾರೇ ಎಲ್ಲಿ ಹೋಗಿದೆ ಹಣ. 2.5 ಲಕ್ಷ ಕೋಟಿ ಹಣವನ್ನ ಕೊಟ್ಟಿದ್ದೇವೆ. 5 ಲಕ್ಷ ಹಣ ಕೊಟ್ಟಿದ್ದೇವೆ. ಅನ್ನಭಾಗ್ಯ ನನ್ನದು ನನ್ನ ಸಹುಕಾರನದು. ಎಲ್ಲಾ ಸೇರಿ 101 ರೂಪಾಯಿ ಎನ್ನುವಂತೆ ಕೇಂದ್ರದ ಅನುದಾನವನ್ನ ಇಟ್ಟುಕೊಂಡು ನಾಟಕ ಮಾಡ್ತಿದ್ದಾರೆ. ಕಾಂಗ್ರೆಸ್ ಎಲ್ಲಿಯವರೆಗೆ ಈ ದೇಶದಲ್ಲಿ ಇರುತ್ತದೆಯೋ ದೇಶ ಉದ್ದಾರ ಆಗೋಲ್ಲ ಎಂದಿದ್ದಾರೆ.

ಜೊತೆಗೆ ಪೂರ್ಣ ಪ್ರಮಾಣದ ಸರ್ಕಾರ ಕೊಡಿ ಅಭಿವೃದ್ದಿ ಎಂದರೇನು ಎಂದು ತೋರಿಸ್ತೇವೆ ಎಂದಿರುವ ಹೆಗಡೆ, ಕಾಂಗ್ರೆಸ್ ನವರು ಬಿಜೆಪಿ ಅಭಿವೃದ್ದಿ ನೋಡಿ ಅಲ್ಲಾಡಿ ಹೋಗಿದ್ದಾರೆ. ಭ್ರಷ್ಟಾಚಾರ ಕಡಿಮೆ ಆಗಲು ಬಿಜೆಪಿ ಸರ್ಕಾರ ಮೋದಿ ನೇತೃತ್ವದ ಸರ್ಕಾರ ಬರಬೇಕು ಎಂದಿದ್ದಾರೆ.

3 thoughts on “ಬಿಜೆಪಿಯ ಅಭಿವೃದ್ಧಿ ನೋಡಿ ಕಾಂಗ್ರೆಸ್‌ನವರು ಅಲ್ಲಾಡಿ ಹೋಗಿದ್ದಾರೆ : ಅನಂತ್‌ ಕುಮಾರ್‌ ಹೆಗಡೆ

Leave a Reply

Your email address will not be published.

Social Media Auto Publish Powered By : XYZScripts.com