ವೀರಪ್ಪ ಮೊಯ್ಲಿಗೆ ಕಿಡಿಗೇಡಿಗಳಿಂದ ಶ್ರದ್ಧಾಂಜಲಿ : ಕಣ್ಣೀರಿಟ್ಟ ಗೋಪಾಲ ಭಂಡಾರಿ

ಉಡುಪಿ : ಚುನಾವಣೆಗೆ ದಿನ ಹತ್ತಿರವಾಗುತ್ತಿದ್ದಂತೆ ಕಾರ್ಕಳದಲ್ಲಿ ಕಾಂಗ್ರೆಸ್‌ನ ಶೀತಲ ಸಮಯ ಸ್ಫೋಟಗೊಂಡಿದೆ.  ವೀರಪ್ಪ ಮೊಯ್ಲಿ ಹಾಗೂ ಅಭ್ಯರ್ಥಿ ಗೋಪಾಲ ಭಂಡಾರಿ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ಪೋಸ್ಟರ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿವೆ.

ವೀರಪ್ಪ ಮೊಯ್ಲಿ ಅವರಿಗೆ ಏಪ್ರಿಲ್‌ 15ರಂದು ಟಿಕೆಟ್‌ ಘೋಷಣೆಯಾಗಿದ್ದು, ಅದೇ ದಿನ ಮೊಯ್ಲಿ ನಿಧನರಾಗಿದ್ದಾರೆ ಎಂದು ಬರೆಯಲಾಗಿದೆ.

ವೀರಪ್ಪ ಮೊಯ್ಲಿ ಅವರಿಗೆ ಏಪ್ರಿಲ್‌ 15ರಂದು ಟಿಕೆಟ್‌ ಘೋಷಣೆಯಾಗಿದ್ದು, ಅದೇ ದಿನ ಮೊಯ್ಲಿ ನಿಧನರಾಗಿದ್ದಾರೆ ಎಂದು ಬರೆಯಲಾಗಿದೆ. ಕಿಡಿಗೇಡಿಗಳು ಈ ಕೃತ್ಯ ಎಸಗಿರುವುದರ ಮಧ್ಯೆ ಟಿಕೆಟ್ ಆಕಾಂಕ್ಷಿಯಾಗಿರುವ ಮುನಿಯಾಲು ಉದಯ್‌ ಕುಮಾರ್ ಶೆಟ್ಟಿ ಬೆಂಬಲಿಗರು ಗೋಪಾಲ್ ಭಂಡಾರಿ ಅವರ ಮನೆಗೆ ತೆರಳಿ ಕಣದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದ್ದಾರೆ. ತಾವು ಬಿ ಫಾರಂ ಹಿಂದಕ್ಕೆ ನೀಡಿ, ಸ್ಪರ್ಧೆಯಿಂದ ಹಿಂದೆ ಸರಿಯದಿದ್ದರೆ ಬೂತ್ ನಲ್ಲಿ ಕಾರ್ಯಕರ್ತರು ಪ್ರಚಾರಕ್ಕೆ ಸಿಗದಂತೆ ಮಾಡುತ್ತೇವೆ ಎಂದು ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಭಂಡಾರಿ ಕಣ್ಣೀರಿಟ್ಟಿದ್ದಾರೆ. ಕಳೆದ 40 ವರ್ಷದ ರಾಜಕಾರಣದಲ್ಲಿ, 10 ವರ್ಷದ ಶಾಸಕತ್ವದಲ್ಲಿ ಒಂದು ರೂಪಾಯಿಯನ್ನು ಯಾರಿಂದಲೂ ಪಡೆದಿಲ್ಲ. ನನಗೆ, ನಮ್ಮೆಲ್ಲರ ಮುಖಂಡ ವೀರಪ್ಪ ಮೊಯ್ಲಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅಪಮಾನ ಮಾಡಿದ್ದಾರೆ. ಜೊತೆಗೆ ನನ್ನ ಕುಟುಂಬಕ್ಕೆ, ಮಕ್ಕಳಿಗೆ- ಹೆಂಡತಿಗೆ ಹೀನಾಯವಾಗಿ ಬೈಯ್ಯಲಾಗುತ್ತಿದೆ ಎಂದು ಆರೋಪಿಸಿ ಕಣ್ಣೀರಿಟ್ಟಿದ್ದಾರೆ.

ಜೊತೆಗೆ ಧಮ್ಕಿಗೆಲ್ಲ ನಾನು ಹೆದರೋದಿಲ್ಲ, ಭ್ರಷ್ಟಾಚಾರದಿಂದ ಮಾಡಿದ ಹಣ ನನ್ನಲ್ಲಿಲ್ಲ. ಸಾಲದಲ್ಲಿರುವ ನಾನು ಜನಸೇವೆ ಮಾಡುತ್ತೇನೆ ಎಂದು ಗೋಪಾಲ ಭಂಡಾರಿ ಹೇಳಿದ್ದಾರೆ.

Leave a Reply

Your email address will not be published.