ಸಿದ್ದರಾಮಯ್ಯ ಎಲ್ಲೇ ಚುನಾವಣೆಗೆ ನಿಂತರೂ ಗೆದ್ದು ಬರುತ್ತಾರೆ : ಎಂ.ಬಿ ಪಾಟೀಲ

ವಿಜಯಪುರ ಸಿಎಂ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆಯಿಂದೆ ಹಿಂದೆ ಸರಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿಬ ಎಂ.ಬಿ ಪಾಟೀಲ್, ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ. ‘ ಸಿಎಂ ಉತ್ತರ ಕರ್ನಾಟಕದಿಂದ ಸ್ಪರ್ಧಿಸಿದಲ್ಲಿ ಈ ಭಾಗದಲ್ಲಿ ಪಕ್ಷದ ವರ್ಚಸ್ಸು ಹೆಚ್ಚುತ್ತದೆ. ಸಚಿವ ವಿನಯ ಕುಲಕರ್ಣಿ, ನಾನು ಹಾಗೂ ಇತರರು ಸೇರಿ ಸಿಎಂ ರನ್ನ ಉ. ಕರ್ನಾಟಕದಿಂದ ಸ್ಪರ್ಧಿಸಲು ಒತ್ತಾಯಿಸಿದ್ದೇವು ‘

‘ ಬಾದಾಮಿಯಿಂದ ಸ್ಪರ್ಧಿಸಲು ಸೂಚಿವಂತೆ ನೀಡುವಂತೆ ಹೈಕಮಾಂಡ್ ಗೆ ರಿಕ್ವೆಸ್ಟ್ ಮಾಡಿದ್ದೇನೆ. ಬಾದಾಮಿಯಿಂದ ಸಿಎಂ ಸ್ಪರ್ಧೆ ಇಲ್ಲ ಎಂದಾಗ ಕಾರ್ಯಕರ್ತರು ನಿರಾಶರಾಗಿದ್ದಾರೆ. ಸಿಎಂ ಎಲ್ಲೆ ಚುನಾವಣೆಗೆ ನಿಂತರು ಗೆದ್ದು ಬರ್ತಾರೆ. ಸಿಂದಗಿ, ಬಾಗೇವಾಡಿ, ಬಸವ ಕಲ್ಯಾಣ ಎಲ್ಲೆ ನಿಂತರು ಸಿಎಂ ಗೆದ್ದು ಬರ್ತಾರೆ ‘ ಎಂದು ಮಾಧ್ಯಮ ಗೋಷ್ಟಿ ನಡೆಸಿದ ಸಚಿವ ಎಂ ಬಿ ಪಾಟೀಲ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.