ಶಿಕಾರಿಪುರದಲ್ಲಿರುವ ಹೆಣ್ಣುಬಾಕನ CDಯಿಂದಾಗಿಯೇ ಹಾಲಪ್ಪನಿಗೆ ಟಿಕೆಟ್‌ : ಬೇಳೂರು ಬಾಂಬ್‌

ಶಿವಮೊಗ್ಗ : ಸಾಗರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಹರತಾಳು ಹಾಲಪ್ಪ ವಿರುದ್ದ ಗಂಭೀರ ಆರೋಪ ಮಾಡಿರುವ ಅವರು, ತಮಗೆ ಟಿಕೆಟ್‌ ತಪ್ಪಿಸಲು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ, ಶೋಭಾ ಕರಂದ್ಲಾಜೆಯೇ ಕಾರಣ ಎಂದು ಗುಡುಗಿದ್ದಾರೆ.

ಶಿಕಾರಿಪುರದಲ್ಲಿ ಒಬ್ಬ ಹೆಣ್ಣುಬಾಕ ಇದ್ದಾನೆ. ಆತನ ಸಿ.ಡಿ ಹಾಲಪ್ಪನ ಬಳಿ ಇರಬಹುದು. ಇದೇ ಕಾರಣಕ್ಕೆ ಪಕ್ಷ ಬಿಡಲು ಮುಂದಾಗಿದ್ದ ಹಾಲಪ್ಪನನ್ನು ಕರೆದುಕೊಂಡು ಬಂದು ಟಿಕೆಟ್ ನೀಡಿದ್ದಾರೆ. ನಾನು ಕೆಜೆಪಿಗೆ ಹೋಗದ ಕಾರಣ ನನ್ನ ಟಿಕೆಟ್ ತಪ್ಪಿಸಲಾಗಿದೆ. ಸಾಗರದಲ್ಲಿ ಕಳೆದ ಐದು ವರ್ಷಗಳಲ್ಲಿ ಬಿಜೆಪಿಯನ್ನು ಪ್ರಬಲ ಪಕ್ಷವನ್ನಾಗಿ ಮಾಡಿದ್ದೇನೆ.  ಸಮೀಕ್ಷೆಗಳು ಸಹ ನನ್ನ ಪರವಾಗಿದ್ದರೂ ಹಾಲಪ್ಪಂಗೆ ಟಿಕೆಟ್ ನೀಡಿರುವುದಾಗಿ ಆರೋಪಿಸಿದ್ದಾರೆ. ಅಲ್ಲದೆ ಹಾಲಪ್ಪ ಕಾಮುಕರ ಸಂಘದ ಅಧ್ಯಕ್ಷ, ಒಂದಿಷ್ಟು ಕಾಮುಕರನ್ನ ಹೆಣ್ಣು ಬಾಕರನ್ನ ಜೊತೆಗಿಟ್ಟುಕೊಂಡು ಶಿವಮೊಗ್ಗದಲ್ಲಿ ರಾಜಕಾರಣ ಮಾಡುತ್ತಿದ್ದಾನೆ. ಹೆಣ್ಣುಮಕ್ಕಳು ಚಿ.ಥೂ ಎನ್ನುತ್ತಾರೆ. ನಾನು ಹಾಲಪ್ಪ ಪರವಾಗಿ ಹೇಗೆ ಮತ ಕೇಳಲಿ ಎಂದು ಪ್ರಶ್ನಿಸಿದ್ದಾರೆ.

ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂದಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ ಎಂದಿರುವ ಅವರು,   ಕ್ಷೇತ್ರದ ಜನ ನನ್ನೊಂದಿಗೆ ಇದ್ದಾರೆ.. ನಾನು ಜೆಡಿಎಸ್‌ ಸೇರುವುದಿಲ್ಲ. ಬಂಡಾಯ ಅಭ್ಯರ್ಥಿಯಾಗಿ ಸೇರುವುದು ಖಚಿತ ಎಂದಿದ್ದಾರೆ.

 

 

 

Leave a Reply

Your email address will not be published.