IPL : ರಾಜಸ್ಥಾನ ರಾಯಲ್ಸ್ ವಿರುದ್ಧ ಗೆದ್ದ ಕೆಕೆಆರ್ : ನಿತೀಶ್ ರಾಣಾ ಪಂದ್ಯಶ್ರೇಷ್ಟ

ಜೈಪುರದ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್ ಟಿ20 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ 7 ವಿಕೆಟ್ ಗಳಿಂದ ಜಯಿಸಿದೆ. ಈ ಜಯದೊಂದಿಗೆ ಕೆಕೆಆರ್, ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ.

ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಲಿಳಿದ ರಾಜಸ್ಥಾನ ರಾಯಲ್ಸ್ 20 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 160 ರನ್ ಮೊತ್ತ ಕಲೆ ಹಾಕಿತು. ರಾಜಸ್ಥಾನ ಪರವಾಗಿ ಅಜಿಂಕ್ಯ ರಹಾನೆ 36, ಡಾರ್ಸಿ ಶಾರ್ಟ್ 44 ರನ್ ಗಳಿಸಿದರು.

ಗುರಿಯನ್ನು ಬೆನ್ನತ್ತಿದ ಕೆಕೆಆರ್ 18.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 163 ರನ್ ಸೇರಿಸಿ ಗೆಲುವು ಸಾಧಿಸಿತು. ಕೆಕೆಆರ್ ಪರವಾಗಿ ರಾಬಿನ್ ಉತ್ತಪ್ಪ 48, ದಿನೇಶ್ ಕಾರ್ತಿಕ್ 42, ಸುನೀಲ್ ನರೈನ್ 35, ನಿತೀಶ್ ರಾಣಾ 35 ರನ್ ಗಳಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com