ಪುನೀತ್‌ ಅಲ್ಲ, ಯಶ್‌ ಅಲ್ಲ… ಕನ್ನಡದ ಕೋಟ್ಯಾಧಿಪತಿ ಶೋನ ಸಾರಥ್ಯ ಈಗ ಇವರ ಹೆಗಲಿಗೆ…!

ಕನ್ನಡದ ಕಿರುತೆರೆಯಲ್ಲಿ ಹೊಸ ಇತಿಹಾಸ ಬರೆದಿದ್ದ ಕನ್ನಡದ ಕೋಟ್ಯಾಧಿಪತಿ ಶೋ ಪವರ್‌ ಸ್ಟಾರ್ ಪುನೀತ್‌ರಿಂದಾಗಿಯೇ ಮನೆ ಮಾತಾಗಿದ್ದು, ಪುನೀತ್‌ ಅವರ ಅದ್ಭುತ ನಿರೂಪಣೆ,  ಸರಳತೆ, ಮುಗ್ಧತೆ ಇದೆಲ್ಲವೂ ನೋಡುಗರಿಗೆ ಹತ್ತಿರವಾಗಿತ್ತು.

ಕುಟುಂಬ ಸಮೇತರಾಗಿ ಕುಳಿತು ನೋಡುತ್ತಿದ್ದ ಈ ಕಾರ್ಯಕ್ರಮ ಈಗಾಗಲೆ ಎರಡು ಸೀಸನ್‌ಗಳನ್ನು ಮುಗಿಸಿ ಮೂರನೇ ಸೀಸನ್‌ ಆರಂಭವಾಗುವ ಹಂತದಲ್ಲಿದೆ. ಆದರೆ ಈ ಬಾರಿ ಪುನೀತ್‌ ರಾಜ್‌ ಕುಮಾರ್ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿಲ್ಲ. ಬದಲಿಗೆ ಯಶ್‌ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಬಳಿಕ ಅವರೂ ಈ ಕಾರ್ಯಕ್ರಮದ ನಿರೂಪಣೆ ಮಾಡುವುದಿಲ್ಲ ಎಂದು ತಿಳಿದಿದ್ದು,  ಕಾರ್ಯಕ್ರಮದ ನಿರೂಪಕರು ಯಾರು ಎಂಬ ಗೊಂದಲ ಪ್ರೇಕ್ಷಕರಿಗೆ ಇತ್ತು. ಪುನೀತ್‌ಗೆ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಕಾರಣ ಕಾರ್ಯಕ್ರಮದ ನಿರೂಪಣೆಯನ್ನು ನಿರಾಕರಿಸಿದ್ದರು.

ಅಲ್ಲದೆ ಯಶ್‌ ಸಹ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಿರುವ ಕಾರಣ ಅವರೂ ಒಪ್ಪಿರಲಿಲ್ಲ. ಆದರೆ ಕೊನೆಗೆ ಈ ಕಾರ್ಯಕ್ರಮದ ನಿರೂಪಣೆಗೆ ನಟ ರಮೇಶ್‌ ಅರವಿಂದ್ ಒಪ್ಪಿಕೊಂಡಿದ್ದು, ಇನ್ಮುಂದೆ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದ ಸಾರಥಿಯಾಗಿದ್ದ ರಮೇಶ್‌ ಕನ್ನಡದ ಕೋಟ್ಯಾಧಿಪತಿಯ ಸಾರಥಿಯೂ ಆಗಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com