ಗದಗ : ಈ ಬಾರಿ ರೋಣ ವಿಧಾನಸಭಾ ಕ್ಷೇತ್ರದ ಗದ್ದುಗೆ ಯಾರಿಗೆ ?

ಗದಗ ಜಿಲ್ಲೆಯ ಈ ಬಾರಿಯ ಚುನಾವಣೆಯಲ್ಲಿ ರೋಣ ವಿಧಾನಸಭಾ ಕ್ಷೇತ್ರವೂ ಸಹ ಕುತೂಹಲ ಕೆರಳಿಸಿದೆ. ಜಿಲ್ಲೆಯಲ್ಲಿ ಈಗಾಗ್ಲೇ ಇರುವ 4 ವಿಧಾನಸಭಾ ಕ್ಷೇತ್ರದಲ್ಲಿ ರೋಣದಲ್ಲೂ ಸಹ ಕಾಂಗ್ರೆಸ್ ಶಾಸಕ ಜಿ ಎಸ್ ಪಾಟೀಲ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ. ಅಲ್ಲದೆ ನವೀಕರಿಸಬಹುದಾದ ಇಂಧನ ಮೂಲಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಈಗಾಗ್ಲೇ ಕಾಂಗ್ರೆಸ್‍ನ ಟಿಕೆಟ್ ಸಹ ಇವರಿಗೆ ನೀಡಲಾಗಿದೆ. ಈ ಬಾರಿಯೂ ಸಹ ತಮ್ಮ ಗೆಲುವಿನ ನಾಗಾಲೋಟ ಮುಂದುವರೆಸೋ ನಿಟ್ಟಿನಲ್ಲಿ ಕಾರ್ಯಗಳನ್ನು ಆರಂಭಿಸಿದ್ದಾರೆ.

ಇನ್ನು ಇವರ ಪ್ರಬಲ ವಿರೋಧಿ ಎಂದೇ ಬಿಂಬಿತವಾಗಿರೋ ಮಾಜಿ ಸಚಿವ ಬಿಜೆಪಿಯ ಕಳಕಪ್ಪ ಬಂಡಿ ಈ ಬಾರಿಯೂ ಸಹ ರೋಣ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧಿಸುತಿದ್ದಾರೆ.

—–ಕ್ಷೇತ್ರದರ್ಶನ—–

ರೋಣ ವಿಧಾನಸಭೆ ಕ್ಷೇತ್ರದ ಸಂಭವನೀಯ ಅಭ್ಯರ್ಥಿಗಳು

ಕಾಂಗ್ರೆಸ್- ಕಾಂಗ್ರೆಸ್‍ನ ಹಾಲಿ ಶಾಸಕ ಜಿ.ಎಸ್ ಪಾಟೀಲ್
ಬಿಜೆಪಿ- ಕಳಕಪ್ಪ ಬಂಡಿ,

ರೋಣ-ಜಾತಿವಾರು ಮತಗಳು

ರೋಣ ವಿಧಾನಸಭಾ ಕ್ಷೇತ್ರದಲ್ಲಿ ಪಂಚಮಸಾಲಿ 48430, ಜಂಗಮ 3062, ಬಣಜಿಗ 11751, ರೆಡ್ಡಿ 12147, ಸಾದರ ಲಿಂಗಾಯತ 5102, ಗಾಣಿಗೇರ 15458, ಕುಡುಒಕ್ಕಲಿಗ 4310, ಕುರುಬ 29987, ಹಿಂದುಳಿದ ವರ್ಗ (ವಿವಿಧ ಒಳಪಂಗಡ ಸೇರಿ) 30120, ಎಸ್ಟಿ 14941, ಬ್ರಾಹ್ಮಣ 2520, ಮುಸ್ಲಿಂ 19871, ಕ್ರಿಶ್ಚಿಯನ್ 412, ಗಂಗಾಮತ 5910, ಗೊಲ್ಲರು 591, ಉಡುಪಿ ಬ್ರಾಹ್ಮಣರು 3971, ಕುಂಬಾರ 4897, ವಿಶ್ವಕರ್ಮ 5410, ವೈಶ್ಯರು 810, ಹೀಗೆ ರೋಣ ಕ್ಷೇತ್ರದಲ್ಲಿ ಜಾತಿವಾರು ಮತಗಳಿದ್ದು ಅಭ್ಯರ್ಥಿಗಳ ಜಾತಿಯೂ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಲಿದೆ ಎನ್ನುವ ಲೆಕ್ಕಚಾರವೂ ಕ್ಷೇತ್ರದಾದ್ಯಂತ ಬಿರುಸಿನ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಹಾಲಿ ಎಂಎಲ್‍ಎ ಜಿ ಎಸ್ ಪಾಟೀಲ್, ಕಾಂಗ್ರೆಸ್
ಮತದಾರರ ಸಂಖ್ಯೆ-219700
ಪುರುಷ ಮತದಾರರು-110155
ಮಹೀಳಾ ಮತದಾರರು-109530

ಕಾಂಗ್ರೆಸ್ ಗೆಲುವಿಗೆ ಪೂರಕವಾಗಬಹುದಾದ ಅಂಶಗಳು

1.ಕ್ಷೇತ್ರದಲ್ಲಿ ಜಿ ಎಸ್ ಪಾಟೀಲ್ ಮಾಡಿರುವ ಅಭಿವೃದ್ಧಿ ಕೆಲಸಗಳು. ಪ್ರಮುಖವಾಗಿ ರೈತರ ಹೊಲಗಳಿಗೆ ಹೆಚ್ಚಾಗಿ ಸಂಪರ್ಕ ರಸ್ತೆಗಳ ನಿರ್ಮಾಣ, ಕೃಷಿ ಹೊಂಡಗಳ ದಾಖಲೆ ನಿರ್ಮಾಣ.
2.ಪಕ್ಷದ ಮೇಲಿನ ಹಿಡಿತ. ಯಾವೊಬ್ಬ ಕಾರ್ಯಕರ್ತನೂ ಸಹ ಇವರ ವಿರೋಧ ಮಾತಾಡದೇ ಇರೋದು.
3.ಕಾರ್ಯಕರ್ತರಲ್ಲಿರುವ ಕಡಿಮೆ ಪ್ರಮಾಣದ ಅಸಮಾಧಾನ.
4.ಕೆರೆಗಳಿಗೆ ನೀರು ತುಂಬಿಸಿದ್ದು, ಗ್ರಾಮೀಣ ಭಾಗದಲ್ಲಿ ಸಿಸಿ ರಸ್ತೆ ನಿರ್ಮಾಣ ಕುಡಿಯೋ ನೀರು ಘಟಕಗಳ ಸ್ಥಾಪನೆ.

ಕಾಂಗ್ರೆಸ್ ಹಿನ್ನೆಡೆಗೆ ಪೂರಕವಾಗಬಹುದಾದ ಅಂಶಗಳು

1.ಕಾರ್ಯಕರ್ತರಲ್ಲಿ ಅಸಮಾಧಾನ ಕಡಿಮೆಯಿದ್ರೂ ಸಹ ಸಂಪೂರ್ಣವಾಗಿ ಸಮಾಧಾನ ಹೊಂದಿರದೆ, ಬೂದಿಮುಚ್ಚಿದ ಕೆಂಡಂದಂತಹ ಪರಿಸ್ಥಿತಿ.
2.ರೋಣದಂತಹ ಪಟ್ಟಣ ಹಾಗೂ ಕ್ಷೇತ್ರ ವ್ಯಾಪ್ತಿಯ ಪುರಸಭೆ, ಪಟ್ಟಣಪಂಚಾಯತಿಯ ಪಟ್ಟಣಗಳ ಹದಗೆಟ್ಟ ರಸ್ತೆಗಳ ಅಭಿವೃದ್ಧಿ ಪಡಿಸದೇ ಇರುವುದು.
3.ಮಂಜೂರಾದ ಯೋಜನೆಗಳ ನಿಧಾನಗತಿಯ ಅನುಷ್ಟಾನ.
4.ಬಹುದೊಡ್ಡ ಕ್ಷೇತ್ರವಾದ್ದರಿಂದ ಕ್ಷೇತ್ರದ ಹಲವು ಹಳ್ಳಗಳಿಗೆ ಇಂದಿಗೂ ಸಹ ಭೇಟಿ ನೀಡದೇ ಇರೋದು.

ಬಿಜೆಪಿಯ ಗೆಲುವಿಗೆ ಪೂರಕವಾಗಬಹುದಾದ ಅಂಶಗಳು.

1.ಈ ಹಿಂದಿನ ಚುನಾವಣೆಗಳನ್ನು ನೋಡಿದ್ರೆ ಕ್ಷೇತ್ರದ ಜನ ಒಮ್ಮೆ ಕಾಂಗ್ರೆಸ್ ಒಮ್ಮೆ ಬಿಜೆಪಿಗೆ ಗೆಲವು ನೀಡಿದ್ದಾರೆ. ಈ ನಿಟ್ಟಿನಲ್ಲಿ ಈ ಬಾರಿ ಬಿಜೆಪಿ ಸರದಿ ಬರಬಹುದು ಎನ್ನೋ ನಿರೀಕ್ಷೆ.
2.ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಅದ್ರಲ್ಲೂ ಗಜೇಂದ್ರಗಡ ಸುತ್ತಮುತ್ತಲ ಹಲವಾರು ಹಳ್ಳಿಗಳಲ್ಲಿ ಬಿಜೆಪಿ ಪಕ್ಷದ ವಾತಾವರಣ.
3.ಜಿ ಎಸ್ ಪಾಟೀಲ್ ಮೂಲತಃ ಗೌಡ್ಕಿ ಮನೆತನದವರಾದ್ದರಿಂದ ಜನ್ರನ್ನು ಹೆಚ್ಚಾಗಿ ಹತ್ತಿರ ಬಿಟ್ಟುಕೊಳ್ಳೋದಿಲ್ಲ ಎನ್ನೋ ಅಂಶ.
4.ಈ ಬಾರಿ ಚುನಾವಣೆ ರಂಗೇರೋ ನಿರೀಕ್ಷೆಗಳಿರೋದ್ರಿಂದ, ಮತ್ತು ಜಾತಿ ಲೆಕ್ಕಾಚಾರವೂ ಕೆಲಸ ಮಾಡುವ ನಿರೀಕ್ಷೆ.

ಬಿಜೆಪಿಯ ಹಿನ್ನೆಡೆಗೆ ಪೂರಕವಾಗಬಹುದಾದ ಅಂಶಗಳು

1.ಜಿ ಎಸ್ ಪಾಟೀಲ್ ಅವರು ಹಿಂದೆಂದಿಗಿಂತಲೂ ಈ ಬಾರಿ ಮಾಡಿರೋ ಅಭಿವೃದ್ಧಿ ಕೆಲಸಗಳು.
2.ಬಿಜೆಪಿಯ ಕಾರ್ಯಕರ್ತರಲ್ಲಿ ಇರುವ ಒಗ್ಗಟ್ಟಿನ ಕೊರತೆ.
3.ಇದುವರೆಗೂ ಸಹ ರೋಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‍ನ ವೈಫಲ್ಯದ ವಿರುದ್ಧ ಬಿಜೆಪಿ ಧ್ವನಿಯೆತ್ತದೆ ಸುಮ್ಮನೆ ಕುಳಿತುಕೊಳ್ಳೊ ಮೂಲಕ ಜನ್ರ ಗಮನ ಸೆಳೆಯದೇ ಇರೋದು.

ರೋಣ ಕ್ಷೇತ್ರದ ಜನರು ಯಾರಿಗೆ ಮತ ಹಾಕುತ್ತಾರ, ಯಾರಿಗೆ ಜಯ ಕಲ್ಪಿಸುವರು ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published.