ತೆಲಂಗಾಣ : ಜಗತ್ತಿನ ಎರಡನೇ ಅತಿದೊಡ್ಡ ಆಲದ ಮರಕ್ಕೆ ಡ್ರಿಪ್ಸ್‌ ಹಾಕಿ ಚಿಕಿತ್ಸೆ !

ತೆಲಂಗಾಣ : ನಗರೀಕರಣದ ಹೆಸರಿನಲ್ಲಿ ಎಲ್ಲೆಡೆ ಮರಗಳನ್ನು ಕಡಿದು ರಸ್ತೆ, ಕಾಂಪ್ಲೆಕ್ಸ್‌ಗಳು, ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಹಸಿರೇ ಕಾಣದಂತಾಗಿದೆ. ಈ ಮದ್ಯೆ ತೆಲಂಗಾಣದಲ್ಲಿ ಹಸಿರನ್ನು ರಕ್ಷಿಸುವ ಕೆಲಸ ಮಾಡಲಾಗುತ್ತಿದ್ದು, ಸಾವಿಗೀಡಾಗುತ್ತಿದ್ದ 700 ವರ್ಷಗಳ ಹಳೆಯ ಆಲದ ಮರವೊಂದಕ್ಕೆ ಡ್ರಿಪ್‌ ಹಾಕಿ ಬದುಕಿಸುವ ಪ್ರಯತ್ನ ನಡೆದಿದೆ.

ತೆಲಂಗಾಣದ ಮೆಹಬೂಬ ನಗರದಲ್ಲಿ ಪಿಳ್ಳಲಮರಿ ಅಥವಾ ಪೀರ್ಲಾ ಮರ್ರಿ ಎಂದು ಕರೆಯಲ್ಪಡುವ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಈ ಆಲದ ಮರ ಮೂರು ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಇದು ಜಗತ್ತಿನಲ್ಲೇ ಎರಡನೇ ಅತೀದೊಡ್ಡ ಆಲದ ಮರ ಎಂಬ ಖ್ಯಾತಿ ಗಳಿಸಿದೆ. ಆದರೆ ಇತ್ತೀಚಿಗೆ ಈ ಮರದ ಕೆಲ ಭಾಗಕ್ಕೆ ಗೆದ್ದಲು ಹಿಡಿದಿದ್ದು, ಮರ ಸಾಯುವ ಹಂತದಲ್ಲಿತ್ತು.

ಆದರೆ ಇದನ್ನು ನೋಡಿದ ಅಧಿಕಾರಿಗಳು ಮರವನ್ನು ರಕ್ಷಣೆ ಮಾಡಲು ಮುಂದಾಗಿದ್ದು, ಗೆದ್ದಲು ಹುಳುವಿದ್ದ ಜಾಗಕ್ಕೆ ರಸಾಯನಿಕಗಳನ್ನು ಹಾಕಿ ಮರ ಉಳಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅದು ಫಲ ನೀಡದ ಹಿನ್ನೆಲೆಯಲ್ಲಿ ಗೆದ್ದಲು ಹುಳುಗಳನ್ನು ಕೊಲ್ಲುವ ರಸಾಯನಿಗಳನ್ನು ಮರಕ್ಕೆ ಡ್ರಿಪ್‌ ಹಾಕಿದ್ದಾರೆ. ಪ್ರತೀ 2 ಮೀಟರ್‌ಗೆ ಈ ಡ್ರಿಪ್‌ ಹಾಕಲಾಗಿದ್ದು, ಮರ ಮತ್ತೆ ಚೇತರಿಸಿಕೊಳ್ಳುತ್ತಿದೆಯಂತೆ.

 

Leave a Reply

Your email address will not be published.