ಈ ಚುನಾವಣೆ ರಸ್ತೆ, ನೀರಿಗಾಗಿ ಅಲ್ಲ, ಹಿಂದೂ-ಮುಸ್ಲಿಂ ಧರ್ಮಕ್ಕಾಗಿ ನಡೀತಿದೆ ಎಂದ BJP ಶಾಸಕ!

ಬೆಳಗಾವಿ : ಮೇ 12ಕ್ಕೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಅಭ್ಯರ್ಥಿಗಳು ಚುನಾವಣಾ ತಯಾರಿ ನಡೆಸುತ್ತಿದ್ದಾರೆ. ಇದೇ ವೇಳೆ ಬೆಳಗಾವಿಯ ಗ್ರಾಮೀಣ ಕ್ಷೇತ್ರದ ಶಾಸಕ ಸಂಜಯ್‌ ಪಾಟೀಲ್‌ ವಿವಾದಾತ್ಮಕ ಹೇಳಿಕೆ ನೀಡಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಸುಳೇಬಾವಿಯಲ್ಲಿ ಪ್ರಚಾರ ಮಾಡುವ ವೇಳೆ, ಇದು ಹಿಂದು ರಾಷ್ಟ್ರ. ರಾಮ ಮಂದಿರ ನಿರ್ಮಾಣ ಆಗಬೇಕು. ಇದಕ್ಕಾಗಿ ಯಾವ ತ್ಯಾಗಕ್ಕೂ ನಾನು ಸಿದ್ಧ.
ರಾಮ ಮಂದಿರ ನಿರ್ಮಾಣ ಮಾಡಲು ನಾವು ಬದ್ಧ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಲಿ. ನಾವೆಲ್ಲ ಲಕ್ಷ್ಮೀ ಹೆಬ್ಬಾಳ್ಕರ್ ಮತ ಹಾಕೋಣ. ಆದರೆ ಲಕ್ಷ್ಮೀ ಹೆಬ್ಬಾಳ್ಕರ್ ಹೀಗೆ ಹೆಳಲು ಸಾಧ್ಯವಿಲ್ಲ. ಅವರು ಬಾಬರಿ ಮಸೀದಿ ನಿರ್ಮಿಸುವವರು. ನಾವು ರಾಮ ಮಂದಿರ ನಿರ್ಮಾಣ ಮಾಡುವವರು ಎಂದಿದ್ದಾರೆ.
ಈ ಚುನಾವಣೆ ರಸ್ತೆ, ಚರಂಡಿ, ಕುಡಿಯುವ ನೀರಿಗಾಗಿ ಅಲ್ಲ. ಈ ಚುನಾವಣೆ ಹಿಂದು, ಮುಸ್ಲಿಂ ಧರ್ಮದ ಚುನಾವಣೆ. ಯಾರಿಗೆ ಬಾಬರಿ ಮಸೀದಿ, ಟಿಪ್ಪು ಜಯಂತಿ ಮಾಡಲು ಆಸೆ ಇದೆ ಅವರೆಲ್ಲರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಿ. ಶಿವಾಜಿ ಮಹರಾಜರು ಬೇಕಿದ್ರೆ ಬಿಜೆಪಿ ಬೆಂಬಲಿಸಿ ಎಂದಿದ್ದು ಈ ಹೇಳಿಕೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

Leave a Reply

Your email address will not be published.

Social Media Auto Publish Powered By : XYZScripts.com