ಹುಚ್ಚರಾಯ ಸ್ವಾಮಿ ಮೊರೆಹೋದ BSY, ಭಿಕ್ಷೆ ಬೇಡಿದ ಡಿಕೆಶಿ, ಮೆರವಣಿಗೆಯಲ್ಲಿ ಸಾಗಿದ ಈಶ್ವರಪ್ಪ

ಬೆಂಗಳೂರು : ಚುನಾವಣೆ ಹತ್ತಿರವಾಗುತ್ತಿದೆ. ಟಿಕೆಟ್ ಸಿಕ್ಕ ಅಭ್ಯರ್ಥಿಗಳೆಲ್ಲ ನಾಮಪತ್ರ ಸಲ್ಲಿಕೆ ಮಾಡಲು ಪ್ರಾರಂಭಿಸಿದ್ದು, ಇಂದು ರಾಜ್ಯದ ಹಲವೆಡೆ ಅನೇಕ ನಾಯಕರು ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಶಿಕಾರಿಪುರದ ಹುಚ್ಚರಾಯ ಸ್ವಾಮಿ ದೇವಾಲಯ ಹಾಗೂ ರಾಘವೇಂದ್ರ ಸ್ವಾಮಿ ಮಠದಲ್ಲಿ ಪೊಜೆ ಸಲ್ಲಿಸಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮೆರವಣಿಗೆಯಲ್ಲಿ 15 ಸಾವಿರ ಜನ ಭಾಗಿಯಾಗಿದ್ದು, ಬಿಎಸ್ ವೈ ಗೆ ಸಿ ಎಂ ರಮಣ ಸಿಂಗ್, ಅನಂತ ಕುಮಾರ್, ಶ್ರೀರಾಮುಲು, ಸಿದ್ದೇಶ್ವರ್, ಯೊಗೀಶ್ವರ್, ಶಾಸಕ ರಾಘವೇಂದ್ರ ಸೇರಿ ಬಿಜೆಪಿ ಮುಖಂಡರು ಸಾಥ್ ನೀಡಿದ್ದಾರೆ.

ಇನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಮಾನಾಥ್ ರೈ ಇಂದು ನಾಮಪತ್ರ ಸಲ್ಲಿಸಿದರು. ಬಂಟ್ವಾಳ ‌ಮಿನಿ‌ ವಿದಾನಸೌಧದಲ್ಲಿರೋ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ರೈ ತಮ್ಮ ಉಮೇದುವಾರಿಕೆಯನ್ನು‌ ಸಲ್ಲಿಸಿದ್ರು. ಅಪಾರ ಬೆಂಬಲಿಗರೊಂದಿಗೆ ಆಗಮಿಸಿದ‌ ರೈ ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಚುನಾವಣೆಯಲ್ಲಿ ‌ಗೆಲ್ಲೋ ವಿಶ್ವಾಸವನ್ನು ವ್ಯಕ್ತಪಡಿಸಿದ್ರು.

ಇಂದು ರೇಷ್ಮೆ ನಗರಿ ಕನಕಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಾಮಪತ್ರ ಸಲ್ಲಿಸಿದರು. ಜನರಿಂದ ಠೇವಣಿ ಕಟ್ಟಲು ಭಿಕ್ಷೆ ಬೇಡಿದ್ರು. ಇದಕ್ಕು ಮುನ್ನ ಡಿ.ಶಿ. ಶಿವಕುಮಾರ್, ತಮ್ಮ ಪತ್ನಿ ಉಷಾ ಜೊತೆಗೆ ಶಕ್ತಿ ದೇವತೆ ಕಬ್ಬಾಳಮ್ಮ ದೇವಿ ಹಾಗೂ ಮನೆ ದೇವತೆ ಕೆಂಕೇರಮ್ಮ ದೇವರಿಗೆ ಪೂಜೆ ಸಲ್ಲಿಸಿದ್ರು. ಇದೇ ವೇಳೆ ಕೆಂಕರಮ್ಮ ದೇವಸ್ಥಾನದ ಬಳಿ ಜನರಿಂದ ಹಣ ಭಿಕ್ಷೆ ಎತ್ತಿದ್ದ ಡಿ.ಕೆ.ಶಿ ಯವರು ನಂತ್ರ ತಾಲೂಕು‌ ಕಚೇರಿ ಬಳಿಗೆ ಸಾವಿರಾರು ಬೆಂಬಗಲಿಗರೊಟ್ಟಿಗೆ ತೆರಳಿ ನಾಮಪತ್ರ ಸಲ್ಲಿಸಿದ್ರು.

ಚಾಮರಾಜನಗರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ವಾಟಾಳ್‌ ನಾಗರಾಜ್‌ ಸಹ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಕೊಳದ ಗಣಪತಿಗೆ ಪೂಜೆ ಸಲ್ಲಿಸಿ ಬಳಿಕ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಶಿವಮೊಗ್ಗದಲ್ಲೂ ಚುನಾವಣೆಯ ಅಬ್ಬರ ಜೋರಾಗಿದ್ದು, ಮೆರವಣಿಗೆ ಮೂಲಕ ಈಶ್ವರಪ್ಪ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.

 

 

One thought on “ಹುಚ್ಚರಾಯ ಸ್ವಾಮಿ ಮೊರೆಹೋದ BSY, ಭಿಕ್ಷೆ ಬೇಡಿದ ಡಿಕೆಶಿ, ಮೆರವಣಿಗೆಯಲ್ಲಿ ಸಾಗಿದ ಈಶ್ವರಪ್ಪ

Leave a Reply

Your email address will not be published.

Social Media Auto Publish Powered By : XYZScripts.com