ಬಾದಾಮಿ ಕ್ಷೇತ್ರದ ಸೀಟಿನ ಮೇಲೂ ಟವೆಲ್‌ ಹಾಕಿದ ಸಿದ್ದರಾಮಯ್ಯ..? ಇನ್ನೂ ಮುಗಿದಿಲ್ಲ ಕುತೂಹಲ

ಮೈಸೂರು : ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ವಿಚಾರ ಸಂಬಂಧ ಮತ್ತೆ ಕುತೂಹಲ ಮೂಡಿದೆ. ಈ ವಿಚಾರ ಹೈಕಮಾಂಡ್‌ ಅಂಗಳಕ್ಕೆ ತಲುಪಿದ್ದು, ನಾನು ಬಾದಾಮಿಯಿಂದ ಸ್ಪರ್ಧಿಸಬೇಕೇ ಬೇಡವೇ ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನ ನಿವಾಸದಲ್ಲಿ ಮಾತನಾಡಿದ ಅವರು, ನಾನು ಹೈಕಮಾಂಡ್ ಅಲ್ಲ, ನಾನು ಈ ರಾಜ್ಯದ ಮುಖ್ಯಮಂತ್ರಿ ಅಷ್ಟೆ. ಏಳು ಶಾಸಕರಿಗೆ ಟಿಕೆಟ್ ನಿರಾಕರಣೆ ವಿಚಾರದ ಬಗ್ಗೆ ಹೈಕಮಾಂಡ್ ಪರಿಶೀಲನೆ‌ ನಡೆಸುತ್ತದೆ.  ಜಗಳೂರು ಕ್ಷೇತ್ರಕ್ಕೆ ರಾಜೇಶ್ ಗೆ ಟಿಕೆಟ್ ಕೊಡಲು ನಿರ್ಧಾರವಾಗಿದೆ. ಉಳಿದ‌ ಶಾಸಕರ ವಿಚಾರ ರಾಹುಲ್ ಗಾಂಧಿ ತೀರ್ಮಾನಿಸುತ್ತಾರೆ. ಹೈಕಮಾಂಡ್ ‌ನಿರ್ಧಾರಕ್ಕೆ ನಾನು ಬದ್ಧ. ಏಪ್ರಿಲ್ 24ರಿಂದ ರಾಜ್ಯ ಪ್ರವಾಸ ಆರಂಭಿಸುವೆ. ಈ‌ ತನಕ ಎಲ್ಲೆಲ್ಲಿಗೆ ಹೋಗಿಲ್ಲ..ಅಂತಹ ಕಡೆಗಳಿಗೆ ಹೋಗುವೆ, ಎಲ್ಲಿ ಪ್ರಬಲ‌ ಸ್ಪರ್ಧೆ ಇದೆಯೋ ಅಲ್ಲಿಗೂ ಹೋಗುವೆ ಎಂದಿದ್ದಾರೆ.

4 thoughts on “ಬಾದಾಮಿ ಕ್ಷೇತ್ರದ ಸೀಟಿನ ಮೇಲೂ ಟವೆಲ್‌ ಹಾಕಿದ ಸಿದ್ದರಾಮಯ್ಯ..? ಇನ್ನೂ ಮುಗಿದಿಲ್ಲ ಕುತೂಹಲ

Leave a Reply

Your email address will not be published.

Social Media Auto Publish Powered By : XYZScripts.com