IPL ನಲ್ಲಿ ಅತಿ ಹೆಚ್ಚು ರನ್ ಗಳಿಕೆ : ರೈನಾ ಹಿಂದಿಕ್ಕಿದ ವಿರಾಟ್ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸಮನ್ ಎನಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಮಂಗಳವಾರ ವಾಂಖೇಡೆ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.

ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಡಗೈ ಬ್ಯಾಟ್ಸಮನ್ ಸುರೇಶ್ ರೈನಾ ಅವರನ್ನು ವಿರಾಟ್ ಹಿಂದಿಕ್ಕಿದ್ದಾರೆ. ಸುರೇಶ್ ರೈನಾ ಐಪಿಎಲ್ ಟೂರ್ನಿಯಲ್ಲಿ 4558 ರನ್ ಗಳಿಸಿದ್ದಾರೆ. ಅವರನ್ನು ಹಿಂದಿಕ್ಕಿರುವ ವಿರಾಟ್ ಕೊಹ್ಲಿ ತಮ್ಮ ಖಾತೆಯಲ್ಲಿ 4619 ರನ್ ಗಳನ್ನು ಹೊಂದಿದ್ದಾರೆ.

ಮುಂಬೈ ವಿರುದ್ಧದ ಪಂದ್ಯದಲ್ಲಿ 62 ಎಸೆತಗಳನ್ನು ಎದುರಿಸಿ 92 ರನ್ ಗಳಿಸಿದ ಕೊಹ್ಲಿ, 7 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಸಿಡಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com