ಬಾಳೆತೋಟವನ್ನೇ ನಾಶ ಮಾಡಿದ ಕಿಡಿಗೇಡಿಗಳು : ಮುಗಿಲು ಮುಟ್ಟಿದ ರೈತನ ಆಕ್ರಂದನ
ರಾಮಸಾಗರ : ಕಿಡಿಗೇಡಿಗಳು ರಾತ್ರೋ ರಾತ್ರಿ ಬಾಳೆ ಬೆಳೆಯನ್ನು ನಾಶ ಮಾಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ರಾಮಸಾಗರದಲ್ಲಿ ನಡೆದಿದೆ. ಮುಕ್ಕಾಲು ಎಕ್ಕರೆಯಲ್ಲಿ ಒಂದು ಲಕ್ಷ ಬಂಡಾವಾಳ ಹಾಕಿ ಬೆಳೆದಿದ್ದ ಬಾಳೆ ನೆಲಸಮ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ನೆಲಸಮವಾಗಿರುವ ಬೆಳೆ ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದ ರೈತ ಕೊಳ್ಳಿ ದೇವರಾಜ್ ಎಂಬುವವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಬೆಳೆ ನಾಶದಿಂದ ರೈತನ ಆಕ್ರಂದನ ಮುಗಿಲುಮುಟ್ಟಿದ್ದು, ಇತರೆ ರೈತರ ಆತಂಕಕ್ಕೂ ಸಹ ಕಾರಣವಾಗಿದೆ. ಇನ್ನೂ ಈ ಹಿಂದೆ ಇಬ್ಬರು ರೈತರ ಹೊಲದಲ್ಲೂ ಇದೇ ರೀತಿಯಾಗಿತ್ತು. ಬೆಳೆಯನ್ನು ಹಾಳು ಮಾಡಿರುವ ದುಷ್ಕರ್ಮಿಗಳ ವಿರುದ್ಧ ರೈತ ದೇವರಾಜ್ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಪರಿಹಾರ ನೀಡುವಂತೆ ಆಗ್ರಹಿಸಿದ್ದಾನೆ.