ಗರಿಷ್ಟ ಸ್ಕೋರರ್ ಆಗಿದ್ದರೂ Orange Cap ಧರಿಸಲ್ಲ ಅಂದ ಕೊಹ್ಲಿ : ಕಾರಣವೇನು..?

ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆ ಐಪಿಎಲ್ ಟಿ20 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 46 ರನ್ ಗಳಿಂದ ಸೋಲನುಭವಿಸಿತ್ತು. ಮುಂಬೈ ನೀಡಿದ್ದ 214 ರನ್ ಗುರಿಯನ್ನು ಚೇಸ್ ಮಾಡಲು ಇಳಿದಿದ್ದ ಆರ್ ಸಿಬಿ 167ಕ್ಕೆ ಆಲೌಟ್ ಆಗಿತ್ತು.

ಈ ಪಂದ್ಯದಲ್ಲಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ 92 ರನ್ ಗಳಿಸಿದ್ದರು. 62 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದ್ದರು. ಅಲ್ಲದೇ ವಿರಾಟ್, ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಸದ್ಯ ಗರಿಷ್ಟ ಸ್ಕೋರರ್ ಕೂಡ ಆಗಿದ್ದಾರೆ.

Image result for virat refuse orange cap

ಮ್ಯಾಚ್ ಬಳಿಕ ನಡೆದ ಸಮಾರಂಭದಲ್ಲಿ ಗರಿಷ್ಟ ರನ್ ಸ್ಕೋರ್ ಮಾಡಿದವರಿಗೆ ನೀಡಲಾಗುವ ಆರೆಂಜ್ ಕ್ಯಾಪ್ ಅನ್ನು ಕೊಹ್ಲಿಗೆ ನೀಡಲಾಯಿತು. ಆದರೆ ಆರೇಂಜ್ ಕ್ಯಾಪನ್ನು ಧರಿಸಲು ನಿರಾಕರಿಸಿದರು.

‘ ಆರೇಂಜ್ ಕ್ಯಾಪನ್ನು ನಾನು ಸದ್ಯಕ್ಕೆ ಧರಿಸುವುದಿಲ್ಲ. ಏಕೆಂದರೆ ಆರೇಂಜ್ ಕ್ಯಾಪ್ ಧರಿಸುವುದರಿಂದ ಅಥವಾ ಬಿಡುವುದರಿಂದ ನನಗೆ ಅಂತಹ ವ್ಯತ್ಯಾಸವೇನು ಆಗುವುದಿಲ್ಲ. ನನ್ನ ವೈಯಕ್ತಿಕ ಸಾಧನೆಗಿಂತ ನಮ್ಮ ತಂಡ ಗೆಲ್ಲುವುದು ಮುಖ್ಯ. ನಾವು ಉತ್ತಮ ಜೊತೆಯಾಟಗಳನ್ನು ಆಡಿದ್ದರೆ ಗೆಲ್ಲಬಹುದಿತ್ತು. ಮುಂಬೈ ಇಂಡಿಯನ್ಸ್ ಉತ್ತಮವಾಗಿ ಆಡಿದರು ‘ ಎಂದು ಹೇಳಿದ್ದಾರೆ.

One thought on “ಗರಿಷ್ಟ ಸ್ಕೋರರ್ ಆಗಿದ್ದರೂ Orange Cap ಧರಿಸಲ್ಲ ಅಂದ ಕೊಹ್ಲಿ : ಕಾರಣವೇನು..?

Leave a Reply

Your email address will not be published.

Social Media Auto Publish Powered By : XYZScripts.com