ಸಂಸದೆ ಶೋಭಾ ಕರಂದ್ಲಾಜೆಗೆ ಮಾತ್ರ ಟಿಕೆಟ್ ಕೊಟ್ಟಿದ್ದಾರೆ ನಂಗ್ಯಾಕೆ ಕೊಡ್ಲಿಲ್ಲ : ಕರಡಿ ಸಂಗಣ್ಣ

ಕೊಪ್ಪಳ : ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮಾತ್ರ ಟಿಕೆಟ್ ನೀಡಿದ್ದಾರೆ. ನನಗ್ಯಾಕೆ ನೀಡಿಲ್ಲ ಎಂದು ಸಂಸದ ಕರಡಿ ಸಂಗಣ್ಣ ಗರಂ ಆಗಿದ್ದಾರೆ.  ಹೈಕಮಾಂಡ್ ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುತ್ತಿದೆ. ಸಂಸದ ಶ್ರೀರಾಮುಲುಗೆ ಮಾತ್ರ ಟಿಕೆಟ್ ನೀಡಲಾಗುತ್ತೆ ಅಂತ ಹೇಳಲಾಗಿತ್ತು. ಇದಕ್ಕೆ ಎಲ್ಲಾ ಸಂಸದರು ಒಪ್ಪಿಗೆ ಸೂಚಿಸಿದ್ದರು. ನಾನು ಟಿಕೆಟ್ ಆಕಾಂಕ್ಷಿ ಆಗಿದ್ದೆ. ನನಗೂ ಟಿಕೆಟ್ ನೀಡಲು ಹೈಕಮಾಂಡ್ ಗೆ ಒತ್ತಾಯಿಸಿದ್ದೆ. ಆದರೆ ಸಂಸದರಿಗೆ ಟಿಕೆಟ್‌ ನೀಡುವುದಿಲ್ಲ ಎಂದು ಶೋಭಾ ಕರಂದ್ಲಾಜೆಗೆ ಟಿಕೆಟ್‌ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಟಿಕೆಟ್ ನೀಡಲು ಇನ್ನೂ ಎರಡು ದಿನ ಹೈಕಮಾಂಡ್‌ಗೆ ಗಡುವು ಕೊಟ್ಟಿದ್ದೇನೆ.  ನನಗೆ ಟಿಕೆಟ್ ನೀಡಿದ್ರೆ ನನ್ನ ಗೆಲವು ನಿಶ್ಚಿತ. ತಕ್ಷಣ ಹೈಕಮಾಂಡ್ ನನಗೆ ಸ್ಪಷ್ಟನೆ ನೀಡಿ ಟಿಕೆಟ್ ನೀಡಬೇಕು. ಜೆಡಿಎಸ್ ಪಕ್ಷ ಸೇರುವ ಯೋಚನೆ ನಾನು ಮಾಡಿಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com