ಸುಳ್ಳು ಸುದ್ದಿ ಹಬ್ಬಿಸಲು ಬಿಜೆಪಿಗೆ ಸೋಶಿಯಲ್‌ ಮೀಡಿಯಾ ಏಕೆ, ಮೋದಿ ಇದ್ದಾರಲ್ಲಾ ಎಂದ ರಮ್ಯಾ !

ಮಂಡ್ಯ : ಸದಾ ಪ್ರಧಾನಿ ಮೋದಿ ವಿರುದ್ಧ ಒಂದಲ್ಲಾ ಒಂದು ಟ್ವೀಟ್‌ ಮಾಡುತ್ತಾ ವಿವಾದ ಸೃಷ್ಠಿಸುತ್ತಿರುವ ಮಾಜಿ ಸಂಸದೆ ರಮ್ಯಾ ಇದೀಗ ಮತ್ತೊಮ್ಮೆ ಮೋದಿ ವಿರುದ್ಧ ಟ್ವೀಟ್‌ ಮಾಡಿ ವಿವಾದ ಹುಟ್ಟುಹಾಕಿದ್ದಾರೆ.

ಸುಳ್ಳು ಸುದ್ದಿ ಹಬ್ಬಿಸಲು ಬಿಜೆಪಿಗೆ ಸಾಮಾಜಿಕ ಜಾಲತಾಣಗಳ ಅಗತ್ಯವಿಲ್ಲ. ಅವರಿಗೆ ಪ್ರಧಾನಿ ಮೋದಿ ಇದ್ದಾರೆ. ಅವರೇ ಸುಳ್ಳು ಸುದ್ದಿ ಹರಡುತ್ತಾರೆ ಎಂದು  ಟ್ವೀಟ್‌ನಲ್ಲಿ ರಮ್ಯಾ ಲೇವಡಿ ಮಾಡಿದ್ದಾರೆ.

ರಮ್ಯಾ ಅವರ ಟ್ವೀಟ್‌ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

Leave a Reply

Your email address will not be published.