Bihar : ಶಾಸಕಿಯ ಪುತ್ರಿಯೊಂದಿಗೆ ಲಾಲೂ ಪುತ್ರ ತೇಜ್ ಪ್ರತಾಪ್ ನಿಶ್ಚಿತಾರ್ಥ

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಹಿರಿಯ ಪುತ್ರ ತೇಜ್ ಪ್ರತಾಪ್ ಅವರ ನಿಶ್ಚಿತಾರ್ಥ ಬುಧವಾರ ಪಾಟ್ನಾದ ಹೋಟೆಲ್ ಒಂದರಲ್ಲಿ ನೆರವೇರಿದೆ. ಆರ್ ಜೆಡಿ ಪಕ್ಷದಿಂದ 6 ಬಾರಿ ಶಾಸಕಿಯಾಗಿ ಆಯ್ಕೆಯಾದ ಚಂದ್ರಿಕಾ ರಾಯ್ ಅವರ ಮಗಳು ಐಶ್ವರ್ಯಾ ರಾಯ್ ಜೊತೆ ತೇಜ್ ಪ್ರತಾಪ್ ನಿಶ್ಚಿತಾರ್ಥ ನಡೆದಿದೆ.

Image result for Tej pratap Aishwrya

ಈ ಸಮಾರಂಭಕ್ಕೆ ಲಾಲೂ ಹಾಗೂ ರಾಯ್ ಪರಿವಾರದ ಬಂಧುಗಳು, ಆಪ್ತ ಸ್ನೇಹಿತರು ಹಾಜರಿದ್ದರು. ಭ್ರಷ್ಟಾಚಾರದ ಆರೋಪದ ಮೇಲೆ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿರುವ ಲಾಲೂ ಪ್ರಸಾದ್ ಅನುಪಸ್ಥಿತಿಯಲ್ಲಿಯೇ ನಿಶ್ಚಿತಾರ್ಥ ನೆರವೇರಿತು.

ಐಶ್ವರ್ಯಾ ರಾಯ್ ದೆಹಲಿಯ ವಿಶ್ವವಿದ್ಯಾಲಯದಿಂದ ಇತಿಹಾಸ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಮುಂದಿನ ತಿಂಗಳು ತೇಜ್ ಪ್ರತಾಪ್ – ಐಶ್ವರ್ಯಾ ಮದುವೆ ನಡೆಯಲಿದೆ ಎಂಬ ಮಾಹಿತಿಯಿದೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಹಿಂದಿನ ಸರ್ಕಾರದಲ್ಲಿ ತೇಜ್ ಪ್ರತಾಪ್ ಮಾಜಿ ಆರೋಗ್ಯ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು.

Leave a Reply

Your email address will not be published.