ಇಂಟರ್‌ನೆಟ್‌ ಹೊಸ ಆವಿಷ್ಕಾರವಲ್ಲ, ಮಹಾಭಾರತದ ಕಾಲದಲ್ಲೇ ಇತ್ತು ಎಂದ ತ್ರಿಪುರಾ CM

ಅಗರ್ತಲಾ : ಇಂಟರ್ನೆಟ್‌ ಹೊಸದಾದ ಆವಿಷ್ಕಾರವಲ್ಲ. ಅದು ಮಹಾಭಾರತದ ಕಾಲದಲ್ಲೇ ಇತ್ತು ಎಂದು ತ್ರಿಪುರಾ ಸಿಎಂ ಬಿಪ್ಲಬ್‌ ಕುಮಾರ್‌ ದೇಬ್‌ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಂವಹನ ತಂತ್ರಜ್ಞಾನ ಬೆಳೆದು ಬಂದ ದಾರಿಯನ್ನೇ ತಿರುಚಿದ್ದು, ಧೃತರಾಷ್ಟ್ರನಿಗೆ ಕುರುಕ್ಷೇತ್ರದ 14 ದಿನಗಳ ಯುದ್ಧಭೂಮಿಯ ಘಟನೆಯನ್ನು ಸಂಜಯ ಹೇಳುತ್ತಾನೆ. ಆಗಲೇ ತಂತ್ರಜ್ಞಾನ ಇತ್ತು ಎಂಬುದು ಇದರಿಂದಲೇ ತಿಳಿಯುತ್ತದೆ.  ಸಾವಿರ ವರ್ಷಗಳ ಹಿಂದೆಯೇ ತಂತ್ರಜ್ಞಾನದ ಆವಿಷ್ಕಾರ ಆಗಿದೆ.  ತಂತ್ರಜ್ಞಾನ, ಇಂಟರ್‌ನೆಟ್‌ ಕಂಡು ಹಿಡಿದಿದ್ದು ಭಾರತೀಯರು ಎಂದಿದ್ದಾರೆ.

ಇದೇ ವೇಳೆ ಡಿಜಿಟಲೀಕರಣಕ್ಕೆ ಹೆಚ್ಚಿನ ಮಹತ್ವ ಕೊಡುತ್ತಿರುವ ಮೋದಿಗೆ ಅಭಿನಂದನೆ ಸಲ್ಲಿಸಿದ ಅವರು, ಮೋದಿ ಪ್ರಧಾನಿಯಾದ ಬಳಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತಿದೆ. ತಂತ್ರಜ್ಞಾನ ಶ್ರೀಮಂತರಿಗಷ್ಟೆ ಸೀಮಿತವಾಗಬಾರದು. ಬಡವರಿಗೂ ತಲುಪಬೇಕು. ಪಡಿತರ ವ್ಯವಸ್ಥೆ ಡಿಜಿಟಲೀಕರಣದಿಂದಾಗಿ ಬಡವರಿಗೆ ಸಹಾಯವಾಗಲಿದೆ. ಮುಂದಿನ ಮೂರು ವರ್ಷಗಳಲ್ಲಿ ತ್ರಿಪುರ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಪಣತೊಟ್ಟಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published.