ಇನ್ನು 15 ವರ್ಷಗಳಲ್ಲಿ ಅಮೇಥಿಯನ್ನು ಸಿಂಗಾಪುರದಂತೆ ಮಾಡುತ್ತೇನೆ : ರಾಹುಲ್‌ ಗಾಂಧಿ

ಅಮೇಥಿ : ನನ್ನ ಕ್ಷೇತ್ರ ಅಮೇಥಿಯ ಅಭಿವೃದ್ಧಿಯನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಜನ ಕ್ಯಾಲಿಫೋರ್ನಿಯಾ, ಸಿಂಗಪೂರ್‌ ಕುರಿತು ಮಾತನಾಡುವಂತೆ ಒಂದು ದಿನ ಅಮೇಥಿ ಬಗ್ಗೆ ಕೂಡ ಮಾತನಾಡುವಂತಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಅಮೇಥಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಮುಂದಿನ 15 ವರ್ಷಗಳಲ್ಲಿ ಅಮೇಥಿ ಸಿಂಗಾಪುರದಂತೆ ಆಗುತ್ತದೆ. ಕಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಅಮೇಥಿಯಿಂದ ಹೊರಗೆ ತೆಗೆದುಕೊಂಡು ಹೋಗಿದೆ. ಐಐಟಿ, ಮೆಗಾಫುಡ್‌ ಪಾರ್ಕ್‌, ಪೇಪರ್‌ ಮಿಲ್ಲನ್ನು ಅಮೇಥಿಗೆ ತರಲು ಪ್ರಯತ್ನಿಸಿದ್ದೆ. ಆ ಕೆಲಸವಾಗಿದ್ದರೆ ಅನೇಕರಿಗೆ ಕೆಲಸ ಸಿಗುತ್ತಿತ್ತು. ಆದರೆ ಈ ಪ್ರಯತ್ನವನ್ನು ಕೈಬಿಡುವುದಿಲ್ಲ. ಮತ್ತೆ ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ಮುಂದೊಂದು ದಿನ ಕ್ಯಾಲಿಫೋರ್ನಿಯಾ, ಸಿಂಗಾಪುರದ ಬಗ್ಗೆ ಮಾತನಾಡುತ್ತಿದ್ದ ಜನ ಅಮೇಥಿಯ ಬಗ್ಗೆಯೂ ಮಾತನಾಡಬೇಕು. ಈ ಮಟ್ಟಿಗೆ ಅಮೇಥಿಯನ್ನು ಎತ್ತರಕ್ಕೆ ಕೊಂಡೊಯ್ಯುವುದಾಗಿ ಹೇಳಿದ್ದಾರೆ.

 

 

Leave a Reply

Your email address will not be published.