BSY ಪುತ್ರ ಹಾಗೂ CM ಪುತ್ರನ ವಿರುದ್ಧ ಕಣಕ್ಕಿಳಿಯಲಿದ್ದಾರೆ ಈಶ್ವರಪ್ಪ PA ವಿನಯ್‌ ?

ಮೈಸೂರು : ಚುನಾವಣೆಯಲ್ಲಿ ದಿಗ್ಗಜರು ಸ್ಪರ್ಧಿಸುತ್ತಿರುವ ಹೈವೋಲ್ಟೇಜ್‌ ಕ್ಷೇತ್ರವಾದ ವರುಣಾದಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಫೈಟ್‌ ಕೊಡಲು ಮಾಜಿ ಸಿಎಂ ಬಿಎಸ್‌ವೈ ಪುತ್ರ ಕಣಕ್ಕಿಳಿದಿದ್ದರೆ, ಇವರಿಬ್ಬರಿಗೆ ಸೆಡ್ಡು ಹೊಡೆಯಲು ಬಿಜೆಪಿ ಮುಖಂಡ ಈಶ್ವರಪ್ಪ ಅವರ ಪಿಎ ವಿನಯ್‌ ವರುಣಾದಲ್ಲಿ ಅಭ್ಯರ್ಥಿಯಾಗಿ ನಿಲ್ಲಲು ನಿರ್ಧರಿಸಿದ್ದಾರೆ.

ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ವಿನಯ್ ವಿಜಯೇಂದ್ರಗೆ ಫೈಟ್ ನೀಡಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ  ವಿನಯ್, ಬಿ ಎಸ್ ವೈ ಪುತ್ರನ ಹಾಗೆ ನಾನು ಅಲ್ಲಿ ಬಿಜೆಪಿ ಟಿಕೆಟ್ ಕೇಳಿದ್ದೆ. ಟಿಕೆಟ್ ನೀಡದಿದ್ರೆ ವರುಣಾ ಕ್ಷೇತ್ರದಲ್ಲೇ ಕಣಕ್ಕಿಳಿಯುತ್ತೇನೆ. ಡಾ ಯತೀಂದ್ರ ಅವರನ್ನ ಸೋಲಿಸಲು ನನಗೆ ಟಿಕೆಟ್ ಕೊಡಿ. ವಿಜಯೇಂದ್ರಗೆ ರಾಜಕೀಯ ಅನುಭವ ಇಲ್ಲ ಎಂದಿದ್ದೆ. ಏಪ್ರಿಲ್ 21 ರಂದು ನಾನು ನಂಜನಗೂಡಿನಲ್ಲಿ ವರುಣಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದು ವಿನಯ್ ತಿಳಿಸಿದ್ದಾರೆ.

ಕೆ.ಎಸ್ ಈಶ್ವರಪ್ಪ ಪಿಎ ವಿನಯ್ ಅವರನ್ನ ಕಿಡ್ನಾಪ್ ಮಾಡಲು ಯತ್ನಿಸಲಾಗಿತ್ತು. ಈ ಕುರಿತು ಬಿ ಎಸ್ ಯಡಿಯೂರಪ್ಪ ಪಿಎ, ಆಪ್ತ ಸಹಾಯಕ ಸಂತೋಷ್ ವಿರುದ್ದ ವಿನಯ್ ಕೇಸ್ ದಾಖಲಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com