ಹೆಚ್ಚು ಅಂಕ ಬೇಕಿದ್ದರೆ ವಿವಿ ಅಧಿಕಾರಿಗಳೊಂದಿಗೆ ಅಡ್ಜೆಸ್ಟ್‌ ಮಾಡ್ಕೊಳ್ಳಿ ಎಂದ ಪ್ರಾದ್ಯಾಪಕಿ !!

ಚೆನ್ನೈ : ವಿಶ್ವವಿದ್ಯಾಲಯದ ಅಧಿಕಾರಿಗಳ ಜೊತೆ ಲೈಂಗಿಕ ಕ್ರಿಯೆಗೆ ಸಹಕರಿಸಿದರೆ ಪದವಿ ಪರೀಕ್ಷೆಗಳಲ್ಲಿ ಶೇ.85ರಷ್ಟು ಅಂಕ ಹಾಗೂ ಅಧಿಕ ಹಣ ಕೊಡಿಸುವುದಾಗಿ ನಾಲ್ವರು ವಿದ್ಯಾರ್ಥಿನಿಯರಿಗೆ ಪ್ರಾದ್ಯಾಪಕಿಯೊಬ್ಬರು ಆಮಿಷವೊಡ್ಡಿರುವ ಘಟನೆ ಬೆಳಕಿಗೆ ಬಂದಿದೆ.

ಈ ಸಂಬಂಧ ಕಾಲೇಜು ಹಾಗೂ ಮಹಿಳಾ ಸಂಘಟನೆಗಳು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಾದ್ಯಾಪಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ವಿವಿಯ ಕುಲಾಧಿಪತಿಯಾಗಿರುವ ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್‌ ತನಿಖೆಗೆ ಆದೇಶಿಸಿದ್ದಾರೆ.

ವಿರುಧನಗರ್‌ನ ಪ್ರತಿಷ್ಠಿತ ದೇವಾಂಗ ಕಾಲೇಜಿನಲ್ಲಿ ಗಣಿತ ಪ್ರಾದ್ಯಾಪಕಿಯಾಗಿರುವ ನಿರ್ಮಲಾ ದೇವಿ ಎಂಬಾಕೆ ಕಳೆದ ತಿಂಗಳು ನಾಲ್ವರು ವಿದ್ಯಾರ್ಥಿನಿಯರಿಗೆ ಕರೆ ಮಾಡಿ, ಅಂಕ ಹಾಗು ಹೆಚ್ಚಿನ ಹಣ ಬೇಕಾದರೆ ವಿವಿಯ ಅಧಿಕಾರಿಗಳ ಜೊತೆ ಅಡ್ಜೆಸ್ಟ್‌ ಮಾಡಿಕೊಳ್ಳಬೇಕು ಎಂದಿದ್ದರು. ಈ ಕುರಿತ ಆಡಿಯೋ ಈಗ ವೈರಲ್‌ ಆಗಿದ್ದು, ಪ್ರಕರಣ ಬೆಳಕಿಗೆ ಬಂದಿದೆ.

ಈ ಬಗ್ಗೆ ವಿದ್ಯಾರ್ಥಿನಿಯರು ದೂರು ನೀಡಿದ ಹಿನ್ನೆಲೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಪ್ರಾದ್ಯಾಪಕಿಯನ್ನು ಅಮಾನತು ಮಾಡಿತ್ತು. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಡಿಎಂಕೆ ನಾಯಕ ಸ್ಟಾಲಿನ್‌ ಆಗ್ರಹಿಸಿದ್ದಾರೆ.

Leave a Reply

Your email address will not be published.