ಟಿಕೆಟ್ ಸಿಕ್ಕರೂ ಪ್ರತಿಕ್ರಿಯೆ ನೀಡುತ್ತಿಲ್ಲ ಅಂಬರೀಶ್‌ : ಕುತೂಹಲ ಕೆರಳಿಸಿದ ರೆಬೆಲ್ ಸ್ಟಾರ್‌ ನಡೆ

ಬೆಂಗಳೂರು : ರಾಜ್ಯ ಕಾಂಗ್ರೆಸ್‌ ನಾಯಕರ ವಿರುದ್ಧ ಮುನಿಸಿಕೊಂಡಿರುವ ರೆಬೆಲ್‌ ಸ್ಟಾರ್‌ ಅಂಬರೀಶ್‌ಗೆ ಮಂಡ್ಯ ವಿಧಾನಸಭೆಯಿಂದ ಸ್ಪರ್ಧಿಸಲು ಟಿಕೆಟ್‌ ಸಿಕ್ಕರೂ ಬಿ ಫಾರಂ ಪಡೆಯಲು ಮುಂದಾಗದಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಚುನಾವಣಾ ಅಭ್ಯರ್ಥಿಗಳ ಆಯ್ಕೆ ವೇಳೆ ಇತರೆ ಆಕಾಂಕ್ಷಿಗಳಂತೆ ಅಂಬರೀಶ್‌ ಅರ್ಜಿ ಸಲ್ಲಿಸದಿದ್ದರೂ ಮಂಡ್ಯದಿಂದ ಅವರಿಗೆ ಟಿಕೆಟ್ ನೀಡಿದೆ. ಆದರೆ ಮಂಡ್ಯ ಜಿಲ್ಲಾ ರಾಜಕಾರಣದಲ್ಲಿ ಪಕ್ಷದಲ್ಲಿನ ಕೆಲವರ ಹಸ್ತಕ್ಷೇಪದ ಕುರಿತು ಅಂಬಿ ಅಸಮಾಧಾನಗೊಂಡಿದ್ದು, ಅನೇಕ ಬಾರಿ ಇದನ್ನು ಬಹಿಂರಗವಾಗಿ ಹೊರಹಾಕಿದ್ದರುಯ ಬಳಿಕ ಸ್ವತಃ ಸಿಎಂ ಸಿದ್ದರಾಮಯ್ಯನವರೇ ಅಂಬರೀಶ್ ಅವರ ಮನವೊಲಿಸುವ ಕೆಲಸ ಮಾಡಿದ್ದು, ಅವರಿಗೆ ಟಿಕೆಟ್ ನೀಡುವುದಾಗಿ ಹೇಳಿದ್ದರು.

ಅದರಂತೆ ಅಂಬರೀಶ್‌ಗೇ ಟಿಕೆಟ್ ನೀಡಿದ್ದರೂ ಇದುವರೆಗೂ ಅವರಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಇಂದ ಕೆ.ಜೆ ಜಾರ್ಜ್‌ ಬೆಂಗಳೂರಿನ ಜೆ.ಪಿ ನಗರದಲ್ಲಿರುವ ಅಂಬರೀಶ್ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಜಾರ್ಜ್‌, ಅಂಬರೀಶ್ ಅವರ ಮನವೊಲಿಸಲು ಯತ್ನಿಸಿದ್ದು, ಅಂಬರೀಶ್‌ ನಿರ್ಧಾರದ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.

 

Leave a Reply

Your email address will not be published.

Social Media Auto Publish Powered By : XYZScripts.com