BJP ಯಿಂದ ಟಿಕೆಟ್‌ ಅಂತೂ ಕೊಡ್ಲಿಲ್ಲ, ಒಂದಿಷ್ಟು ವಿಷವನ್ನಾದರೂ ನೀಡಿ ಎಂದ ಬಂಡಾಯ ಅಭ್ಯರ್ಥಿ!

ಬೆಂಗಳೂರು : ನೀವು ಕಷ್ಟಕಾಲದಲ್ಲಿದ್ದಾಗ ನಿಮಗೆ ಬೆನ್ನೆಲುಬಾಗಿ ನಿಮ್ಮ ಪರ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಆದರೆ ನನಗೆ ಈ ಬಾರಿಯೂ ಟಿಕೆಟ್ ವಂಚಿಸಿದ್ದೀರಿ. ಟಿಕೆಟ್ ಕೊಡದ ನೀವು ನನಗೆ ಒಂದು ತೊಟ್ಟು ವಿಷ ವನ್ನಾದರೂ ನೀಡಿ ಎಂದು ಕೊಳ್ಳೇಗಾಲ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಅಭ್ಯರ್ಥಿ ಕೂಡ್ಲೂರು ಶ್ರೀಧರ್ ಮೂರ್ತಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.


ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯನಾಗಿ ಹಲವು ವರ್ಷಗಳಿಂದ ಬಿಜೆಪಿ ಗಾಗಿ ಹಾಗೂ ಯಡಿಯೂರಪ್ಪ ಅವರ ಪರವಾಗಿ ಕಾರ್ಯನಿರ್ವ ಹಿಸಿದ್ದೇನೆ.  2008ರಲ್ಲಿ ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ ಸಂ ರ್ಭದಲ್ಲಿ 2018ರ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಯಡಿಯೂರಪ್ಪ ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಜಿ.ಎನ್.ನಂಜುಂಡಸ್ವಾಮಿ ಅವರಿಗೆ ಟಕೆಟ್ ನೀಡಿ ಪ್ರಾಮಾಣಿಕ ಕಾರ್ಯಕರ್ತರನ್ನು ನಿರ್ಲಕ್ಷಿಸಿದ್ದಾರೆ. ಬಿಜೆಪಿಗಾಗಿ ದುಡಿದ ಹಾಗೂ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರನ್ನು ಎದುರು ಹಾಕಿಕೊಂಡು ತಮ್ಮ ಪರ ಹೋರಾಟ ಮಾಡಿದ ನನಗೆ ಒಂದು ತೊಟ್ಟು ವಿಷವನ್ನಾದರೂ ನೀಡಿ ಎಂದು ಯಡಿಯೂರಪ್ಪ ಅವರಿಗೆ ವಿನಂತಿಸಿಕೊಂಡಿದ್ದಾರೆ.

18 thoughts on “BJP ಯಿಂದ ಟಿಕೆಟ್‌ ಅಂತೂ ಕೊಡ್ಲಿಲ್ಲ, ಒಂದಿಷ್ಟು ವಿಷವನ್ನಾದರೂ ನೀಡಿ ಎಂದ ಬಂಡಾಯ ಅಭ್ಯರ್ಥಿ!

Leave a Reply

Your email address will not be published.

Social Media Auto Publish Powered By : XYZScripts.com