ಅಕ್ಷಯ ತೃತೀಯದ ಬಳಿಕ ಈ ರಾಶಿಯವರಿಗೆ ಒಲಿಯಲಿದೆ ರಾಜಯೋಗ….ಆ ರಾಶಿ ಯಾವುದು?

ಅಕ್ಷಯ ತೃತೀಯದ ಬಳಿಕ ಕೆಲ ರಾಶಿಯ ಜನರಿಗೆ ಅದೃಷ್ಟ ಖುಲಾಯಿಸಲಿದೆ. ಆದರೆ ಅದಕ್ಕಾಗಿ ಒಂದಿಷ್ಟು ಕೆಲಸಗಳನ್ನು ಮಾಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ಅದೃಷ್ಟ ಲಕ್ಷ್ಮಿ ಒಲಿದು, ಈ ಏಳು ರಾಶಿಯವರ ಜೀವನ ಬದಲಿಸುತ್ತಾಳೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಮಿಥುನ ರಾಶಿ : ಈ ಅಕ್ಷಯ ತೃತೀಯದ ಬಳಿಕ ಗಣೇಶನ ದೇವಸ್ಥಾನಕ್ಕೆ ಹೋಗಿ ಹಾಲನ್ನು ನೀಡುವುದರಿಂದ ಧನಪ್ರಾಪ್ತಿಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಜೊತೆಗೆ ವೃದ್ದಱಿಗೆ ವಸ್ತರದಾನ ಮಾಡುವುದರಿಂದಲೂ ಒಳ್ಳೆಯದಾಗುತ್ತದೆ.

ಸಿಂಹರಾಶಿ : ಅಕ್ಷಯ ತೃತೀಯ ಹಬ್ಬದ ಬಳಿಕ ಗುರುಗಳಿಗೆ ಕಡಲೇಕಾಳು ದಾನ ಮಾಡಿ ಬಂದು ಬಳಿಕ ಮನೆಯಲ್ಲಿ ದೇವರಿಗೆ ಸಂಕಲ್ಪ ಮಾಡಿ ಸಿಹಿ ಪದಾರ್ಥವನ್ನು ತಯಾರಿಸಿ ದೇವರಿಗೆ ನೈವೇದ್ಯ ಇಟ್ಟು ಪ್ರಸಾದ ಸ್ವೀಕರಿಸಿದರೆ ಅದೃಷ್ಟ ಖುಲಾಯಿಸುತ್ತದೆ.

ಕನ್ಯಾ : ಈ ದಿನದ ಬಳಿಕ ಅನಾಥ ಮಕ್ಕಳಿಗೆ ಸಿಹಿ ಪದಾರ್ಥಗಳನ್ನು ನೀಡಿದರೆ ಅನಿಷ್ಟ ಕಳೆದು ಅದೃಷ್ಠ  ಬರುವುದು ಖಚಿತ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.

ಕಟಕ :  ಈ ರಾಶಿಯವರಿಗೆ ಅಕ್ಷಯ ತದಿಗೆ ಹಬ್ಬದ ಬಳಿಕ ಗೋವಿಗೆ ಬಾಳೆ ಹಣ್ಣನ್ನು ನೀಡಿ, ಜೊತೆಗೆ ಒಂದು ತಟ್ಟೆಯಲ್ಲಿ ಅಕ್ಕಿ ಹಾಗೂ ಬೆಲ್ಲವನ್ನು ನೀಡಿ. ಅದು ತಿಂದ ಬಳಿಕ ಮನೆಯೊಳಗೆ ಬಂದು ದೇವರಿಗೆ ನೈವೇದ್ಯ ಇಟ್ಟು ಪೂಜೆ ಮಾಡಿದರೆ ಅದೃಷ್ಟ ಖುಲಾಯಿಸುತ್ತದೆ.

ಮಕರ : ಮಕರ ರಾಶಿಯವರು ಒಂದು ಲೋಟ ನೀರಿಗೆ ಅರಿಶಿನ ಬೆರೆಸಿ ಅದನ್ನು ಅರಳಿಕಟ್ಟೆಗೆ ಹಾಕಿ ಸುತ್ತುಬರಬೇಕು. ಹೀಗೆ ಮಾಡುವುದರಿಂದ ಆರೋಗ್ಯ ಹಾಗೂ ಹಣದ ಸಮಸ್ಯೆಗಳು ದೂರಾಗುತ್ತವೆ.

ಕುಂಭ : ಈ ರಾಶಿಯವರು ಗ್ರಾಮದೇವತೆಯ ಗುಡಿಯಲ್ಲಿ ಚೆಂಡು ಹೂವಿನ ಹಾರವನ್ನು ಮಾಡಿ ಅದನ್ನು ಗ್ರಾಮದೇವತೆಗೆ ಹಾಕಬೇಕು. ಜೊತೆಗೆ ಅನ್ನದಾನ ಮಾಡುವುದರಿಂದ ಅದೃಷ್ಟ ಖುಲಾಯಿಸುತ್ತದೆ.

ಮೇಷ : ನಿರಾಶ್ರಿತರಿಗೆ, ಅನಾಥರಿಗೆ ಬಟ್ಟೆ, ಹಾಗೂ ಅನ್ನದಾನ ಮಾಡಿದರೆ ಅದೃಷ್ಟ ಖುಲಾಯಿಸುತ್ತದೆ. ಜೊತೆಗೆ ಬೀದಿ ನಾಯಿಗಳಿಗೆ ಊಟ ಹಾಕುವುದರಿಂದ ಒಳ್ಳೆಯದಾಗುತ್ತದೆ.

11 thoughts on “ಅಕ್ಷಯ ತೃತೀಯದ ಬಳಿಕ ಈ ರಾಶಿಯವರಿಗೆ ಒಲಿಯಲಿದೆ ರಾಜಯೋಗ….ಆ ರಾಶಿ ಯಾವುದು?

Leave a Reply

Your email address will not be published.