ಮಹಿಳೆಯ ನಡತೆಯೇ ರೇಪ್‌ನಂತ ಕೃತ್ಯಕ್ಕೆ ಕಾರಣ ಎಂದಿದ್ದ ಸಾಕ್ಷಿಯಿಂದ ನೈಟ್‌ ಕ್ಲಬ್‌ ಉದ್ಘಾಟನೆ !

ಲಖನೌ : ಉತ್ತರ ಪ್ರದೇಶದ ಉನ್ನಾವ್‌ ನಲ್ಲಿ ಅತ್ಯಾಚಾರ ಘಟನೆ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿರುವ ವೇಳೆ ಅದೇ ಉನ್ನಾವ್‌ ಕ್ಷೇತ್ರದ ಸಂಸದ ಸಾಕ್ಷಿ ಮಹಾರಾಜ್‌ ನೈಟ್‌ ಕ್ಲಬ್‌ ಉದ್ಘಾಟನೆ ಮಾಡಿ ವಿವಾದಕ್ಕೆ ಗುರಿಯಾಗಿದ್ದಾರೆ.

ಸಾಕ್ಷಿ ಮಹರಾಜ್‌ ಸೋಮವಾರ ಲೆಟ್ಸ್‌ ಮೀಟ್‌ ಎಂಬ ಹೆಸರಿನ ನೈಟ್‌ ಕ್ಲಬ್‌ ಉದ್ಘಾಟನೆ ಮಾಡಿದ್ದರು. ಆದರೆ ಈ ಬಗ್ಗೆ ಖಂಡನೆ ವ್ಯಕ್ತವಾದ ಬಳಿಕ ಪ್ರತಿಕ್ರಿಯಿಸಿದ ಅವರು ಅದು ನೈಟ್‌ ಕ್ಲಬ್‌ ಎಂದು ನನಗೆ ತಿಳಿದಿರಲಿಲ್ಲ. ಉತ್ತರ ಪ್ರದೇಶ ಬಿಜೆಪಿ ಮಾಜಿ ಅದ್ಯಕ್ಷ ರಜ್ಜನ್‌ ಸಿಂಗ್‌ ರೆಸ್ಟೋರೆಂಟ್‌ ಉದ್ಘಾಟನೆ ಎಂದಿದ್ದರು. ಅದಕ್ಕೆ ನಾನು ಒಪ್ಪಿಕೊಂಡಿದ್ದೆ. ಅಲ್ಲಿಗೆ ಹೋದ ಬಳಿಕ ಅದೊಂದು ಬಾರ್‌ ಹಾಗೂ ನೈಟ್‌ ಕ್ಲಬ್‌ ಎಂದು ತಿಳಿಯಿತು. ನನ್ನ ವಿರುದ್ದ ಮಾಡಿರುವ ಪಿತೂರಿ ಇದು ಎಂದು ಆರೋಪಿಸಿದ್ದಾರೆ.
ಈ ಹಿಂದೆ ಸಾಕ್ಷಿ ಮಹರಾಜ್‌ ಮಹಿಳೆಯರ ಉಡುಪು ಹಾಗೂ ಅವರ ವರ್ತನೆಯೇ ಅತ್ಯಾಚಾರದಂತಹ ಘಟನೆಗಳಿಗೆ ಕಾರಣ ಎಂದು ವಿವಾದ ಹುಟ್ಟುಹಾಕಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com