ಟಿಕೆಟ್‌ ಕೈ ತಪ್ಪಿದ ಹಿನ್ನೆಲೆ : ಕಮಲ ಬಿಟ್ಟು ತೆನೆ ಹೊರಲು ಸಿದ್ದರಾದ್ರಾ ಸೊಗಡು ಶಿವಣ್ಣ…?

ತುಮಕೂರು : ನಿರೀಕ್ಷೆಯಂತೆ ತುಮಕೂರು ನಗರ ಕ್ಷೇತ್ರದ ಬಿಜೆಪಿ ಟಿಕೆಟ್, ಜಿಲ್ಲಾಧ್ಯಕ್ಷರಾದ ಜ್ಯೋತಿ ಗಣೇಶ್ ಪಾಲಾಗಿದೆ. ಟಿಕೆಟ್ ಗಾಗಿ ತೀವ್ರ ಹೋರಾಟ ನಡೆಸುತ್ತಿದ್ದ ಮಾಜಿ ಸಚಿವ ಸೊಗಡು ಶಿವಣ್ಣಗೆ ನಿರಾಸೆಯಾಗಿದೆ.
ಟಿಕೆಟ್ ಘೋಷಣೆಯಾದ ಬಳಿಕ ಮೌನಕ್ಕೆ ಜಾರಿರುವ ಸೊಗಡು ಶಿವಣ್ಣ ಮಾಧ್ಯಮಗಳಿಂದ ದೂರ ಉಳಿದಿದ್ದಾರೆ. ಅಲ್ಲದೆ ತಮ್ಮ ನಿವಾಸದಲ್ಲಿ ಬೆಂಬಲಿಗರೊಂದಿಗೆ ಸೊಗಡು ಶಿವಣ್ಣ ನಿರಂತರವಾಗಿ ಚರ್ಚೆ ನಡೆಸುತ್ತಿದ್ದಾರೆ. ಟಿಕೆಟ್ ಕೈ ತಪ್ಪಿದ್ದರಿಂದ ರಾಜ್ಯ ನಾಯಕರ ವಿರುದ್ದ ಅಸಮಾಧಾನಗೊಂಡ ಸೊಗಡು ಶಿವಣ್ಣ ಬಿಜೆಪಿಯಲ್ಲಿನ ಸುಮಾರು 45 ವರ್ಷಗಳ ನಂಟು ಕಳೆದುಕೊಳ್ಳಲು ಚಿಂತಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ತೊರೆದು ಜೆ ಡಿ ಎಸ್ ಸೇರಿ ತುಮಕೂರು ನಗರದಿಂದ‌ ಸ್ಪರ್ಧಿಸಲು ‌ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಜೆಡಿಎಸ್ ವರಿಷ್ಟರ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ. ಕಳೆದ ನಾಲ್ಕೈದು ದಿನದ ಹಿಂದೆ ತುಮಕೂರು ಗ್ರಾಮಾಂತರ ಜೆಡಿಎಸ್ ಅಭ್ಯರ್ಥಿ ಗೌರಿಶಂಕರ್ ಅವರನ್ನು ಸೊಗಡು ಶಿವಣ್ಣ ಭೇಟಿಯಾಗಿ ಮಾತು ಕತೆ ನಡೆಸಿದ್ದಾರೆ. ಅಲ್ಲದೆ ಇಂದು ಮದದ್ಯಾಹ್ನ 3ಗಂಟೆಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.

Leave a Reply

Your email address will not be published.

Social Media Auto Publish Powered By : XYZScripts.com